ಗೋಣಿಕೊಪ್ಪಲು, ಮೇ 11: ವೀರಾಜಪೇಟೆ ತಾಲೂಕಿನ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾಲೂಕು ಪರಿಶಿಷ್ಟ ಪಂಗಡ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಿತಿಮತಿ, ನಾಲ್ಕೇರಿ, ಕೆ.ಬಾಡಗ, ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲಾಯಿತು.ನಾಲ್ಕೇರಿ, ಬೊಮ್ಮಾಡು ಹಾಡಿಯ 10 ಫಲಾನುಭವಿಗಳಿಗೆ ತಿತಿಮತಿ, ಆಡುಗುಂಡಿ, (ಮೊದಲ ಪುಟದಿಂದ) ಬೊಂಬುಕಾಡು, ನೊಖ್ಯ, ಚೇನಿಹಡ್ಲು, ಜಂಗಲ್‍ಹಾಡಿ, ಕಾರೆಕಂಡಿ 18 ಫಲಾನುಭಗಳಿಗೆ, ನಿಟ್ಟೂರು ತಟ್ಟೆಕೆರೆ 5 ಮತ್ತು ಕೆ.ಬಾಡಗದ ನಾಣಚ್ಚಿ ಹಾಡಿಯ 3 ಫಲಾನುಭವಿಗಳಿಗೆ ಸೇರಿದಂತೆ ಒಟ್ಟು 36 ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಲಾಯಿತು. ತಲತಲಾಂತರಗಳಿಂದ ಕಾಡುಗಳಲ್ಲಿ ವಾಸವಿರುವ ಗಿರಿಜನರ ಕುಟುಂಬಗಳಿಗೆ ಮೂಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಬಹಳಷ್ಟು ಹಾಡಿ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಇದುವರೆಗೆ 2020ನೇ ಸಾಲಿನಲ್ಲಿ 1380 ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ಪತ್ರವನ್ನು ವಿತರಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. ಹಕ್ಕು ಪತ್ರವನ್ನು ದುರುಪಯೋಗಪಡಿಸಿಕೊಂಡು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡದೇ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಈ ಸಂದರ್ಭ ಸಲಹೆ ನೀಡಿದರು. ಪರಿಶಿಷ್ಟ ಪಂಗಡ ಇಲಾಖೆಯ ತಾಲೂಕು ಅಧಿಕಾರಿ ಗುರುಶಾಂತಪ್ಪ ಅವರು ಈಗಾಗಲೇ 1380 ಹಕ್ಕು ಪತ್ರಗಳನ್ನು ಅರ್ಜಿ ಸಲ್ಲಿಸಿದ ಸುಮಾರು 200 ಅರ್ಜಿಗಳಿಗೆ ಹಕ್ಕು ಪತ್ರ ವಿತರಿಸಬೇಕಾಗಿದೆ ಎಂದರು.

ಈ ಸಂದರ್ಭ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಷಣ್ಮುಗ, ಆರ್.ಎಂ.ಸಿ. ಅಧ್ಯಕ್ಷ ಸುಜಾಪೂಣಚ್ಚ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ ಹಾಜರಿದ್ದರು.