ಮಡಿಕೇರಿ, ಮೇ 11: ಬೇರೆ ರಾಜ್ಯದಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಲ್ಲಿ ಅದರಲ್ಲೂ ವಿಶೇಷÀವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದು ಜಿಲ್ಲೆಯ ತೋಟಗಳಲ್ಲಿ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಅವರವರ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗ ದಿರುವ ಬಗ್ಗೆ ಅಶಾಂತಿ, ಗೊಂದಲ ಉಂಟಾಗಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.
ಈ ಪೈಕಿ ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಮುಂದಾಗಿದ್ದು, ಜಿಲ್ಲಾಡಳಿತವು ಸೂಕ್ಷ್ಮವಾಗಿ ತಿಳಿಸಿ, ಅಂತಹ ನಿರ್ಧಾರವನ್ನು ಕೈ ಬಿಡಲು ಮನವೊಲಿಸಲಾಗಿದೆ. ಸ್ವಂತ ಊರುಗಳಿಗೆ ತೆರಳಲು ಬಯಸುವ ಬೇರೆ ರಾಜ್ಯಗಳ ಕಾರ್ಮಿಕರು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೆÇೀರ್ಟಲ್ ನಲ್ಲಿ ಸಂಬಂಧಪಟ್ಟ ಪಂಚಾಯಿತಿಗಳ ಮೂಲಕ ನೋಂದಣಿ ಮಾಡಿಕೊಳ್ಳಲು ಕೋರಿದೆ. ಸಂಬಂಧಪಟ್ಟ ರಾಜ್ಯಗಳಿಂದ ಅನುಮತಿ ಬಂದ ಕೂಡಲೇ ಪ್ರಯಾಣದ ಯೋಜನೆ ಬಗ್ಗೆ ಜಿಲ್ಲಾಡಳಿತದಿಂದ ಅವರಿಗೆ ಮಾಹಿತಿ ನೀಡಲಾಗುವುದು
ಕಾಲ್ನಡಿಗೆಯಲ್ಲಿ ತೆರಳಲು ಪ್ರೇರೇಪಿಸಿದರೆ ಕ್ರಮ(ಮೊದಲ ಪುಟದಿಂದ) ಮತ್ತು ಪಾವತಿ ಆಧಾರದ ಮೇಲೆ ಜಿಲ್ಲಾಡಳಿತದಿಂದ ರಾಜ್ಯದಲ್ಲಿನ ಪಿಕ್ ಅಪ್ ಸ್ಥಳಗಳಿಗೆ ಕಾರ್ಮಿಕರನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ತೋಟದ ಮಾಲೀಕರು, ಗುತ್ತಿಗೆದಾರರು ಅಥವಾ ಯಾರಾದರೂ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಹೋಗಲು ಪ್ರೇರೇಪಿಸಿದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಿ, ಅವರ ಮೇಲೆ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.