ಗೋಣಿಕೊಪ್ಪಲು: ಶ್ರೀ ರಾಮಕೃಷ್ಣ ಆಶ್ರಮ, ಕುಟ್ಟಾದ ಅನುಗ್ರಹ ಸರ್ವಿಸ್ ಸೆಂಟರ್, ಬಾಡಗದ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಸಹಕಾರದಿಂದ ಕುಟ್ಟ ಗ್ರಾಮದ ಆಟೋ, ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯ ಗೃಹೋಪಯೋಗಿ ವಸ್ತುಗಳ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಲಾಯಿತು. ಪ್ರಪಂಚಕ್ಕೆ ಮಹಾಮಾರಿಯಾಗಿ ಬಂದಿರುವ ಕೊರೊನಾವನ್ನು ನಿಷ್ಕ್ರಿಯಗೊಳಿಸುವ ಕಡೆಗೆ ನಾವು ಸಾಗಬೇಕು ಮತ್ತು ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು ಎಂದು ಆಶ್ರಮದ ಅಧ್ಯಕ್ಷ ಶ್ರೀ ಭೋದಸ್ವರೂಪಾನಂದ ಅವರು ಹೇಳಿದರು.
ಅನುಗ್ರಹ ಸರ್ವಿಸ್ ಸ್ಟೇಷನ್‍ನ್‍ನ ಚಂದನ್ ಕಾಮತ್ ಮಾತನಾಡಿ, ಶ್ರೀ ರಾಮಕೃಷ್ಣ ಆಶ್ರಮವು ಜನರ ಸಂಕಷ್ಟ್ಟದ ಸಮಯದಲ್ಲಿ ಅವರಿಗೆ ಬೇಕಾದ ಸಹಾಯ ಹಸ್ತ ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳ್ಳುವುದಾಗಿ ತಿಳಿಸಿದರು. 130 ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭ ಕುಟ್ಟ ವೃತ್ತ ಪೆÇಲೀಸ್ ನಿರೀಕ್ಷಕ ಪರಶಿವಮೂರ್ತಿ, ಉಪ ನಿರೀಕ್ಷಕ ಚಂದ್ರಪ್ಪ, ಬಾಡಗದ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ದ ವ್ಯವಸ್ಥಾಪಕ ಅಮಿತ್, ಕುಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಅನುಗ್ರಹ ಸರ್ವಿಸ್ ಸ್ಟೇಷನ್‍ನ ಪ್ರತಾಪ್, ಅಜಯ್, ಕುಟ್ಟ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕೇಶವ ಕಾಮತ್ ಸ್ವಾಗತಿಸಿ, ರಾಮಕೃಷ್ಣ ವಂದಿಸಿದರು.
ಕುಟ್ಟದ ಸಿಂಕೋನ ಕಾಲೋನಿಯಲ್ಲಿ 120 ಜನರಿಗೆ ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು. ಸರಕಾರದಿಂದ ಜೆ.ಕೆ. ಆಹಾರದ ಕಿಟ್ ಪಡೆದಿರುವ 82 ಫಲಾನುಭವಿಗಳಿಗೆ ಸೋಪು, ಪೇಸ್ಟ್, ದಿನಬಳಕೆಗೆ ಉಪಯೋಗವಾಗುವ 10 ವಸ್ತುಗಳುಳ್ಳ ಕಿಟ್ ನೀಡಲಾಯಿತು.ಮಡಿಕೇರಿ: ಮಡಿಕೇರಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಸದಸ್ಯರುಗಳು ಹಾಗೂ ಸಮಾಜ ಬಾಂಧವರಿಗೆ ವಿಶ್ವ ಕರ್ಮ ಸಮಾಜ ಸೇವಾ ಸಂಘ ಮತ್ತು ವಿಶ್ವಕರ್ಮ ಮಹಿಳಾ ಸಮಿತಿ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ದಿನಸಿ ಕಿಟ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಬಿ.ಸಿ. ಮೋಹನ್ ಆಚಾರ್ಯ, ಕಾರ್ಯದರ್ಶಿ ಇ.ಬಿ. ಪ್ರವೀಣಾ, ಖಜಾಂಚಿ ಇ.ಎ. ದೀಕ್ಷಿತ್ ಹಾಗೂ ಸಂಘದ ಪದಾಧಿಕಾರಿಗಳು ನೂರೈವತ್ತು ಕಿಟ್ ವಿತರಿಸಿದರು.ಮಡಿಕೇರಿ: ಮಡಿಕೇರಿ ನಗರದ ವಿವಿಧ ಬಡಾವಣೆಯ ಬಡ ಕುಟುಂಬಗಳಿಗೆ ಹ್ಯೂಮಾನಿಟಿ ಫಸ್ಟ್ ಇಂಡಿಯಾದ ಜಿಲ್ಲಾ ಸಮಿತಿ ವತಿಯಿಂದ ನೆರವು ನೀಡಲಾಯಿತು. ಕಳೆದ 40 ದಿನಗಳಿಂದ ಪ್ರತೀ ದಿನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಗರದ ರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಗದ್ದಿಗೆ, ಮಲ್ಲಿಕಾರ್ಜುನ ನಗರ, ಚಾಮುಂಡೇಶ್ವರಿ ನಗರ, ಹಿಲ್ ರಸ್ತೆ, ಮಹದೇವಪೇಟೆ, ರಾಣಿಪೇಟೆಯ 900 ಮಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, 122 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು. 80ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ಜ್ಯೂಸ್, ನೀರು ಒದಗಿಸಲಾಗಿದೆ. ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ಉಸ್ತುವಾರಿ ಮೊಹಮ್ಮದ್ ಶರೀಫ್ ಅವರ ನೇತೃತ್ವದಲ್ಲಿ ಅಹಮ್ಮದಿಯ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಎಂ.ಬಿ. ಝಹೀರ್ ಅಹಮ್ಮದ್, ಕಾರ್ಯಕರ್ತರಾದ ಎಂ.ಯು. ಉಸ್ಮಾನ್, ಅಬ್ದುಲ್ ಸಾಜೀದ್, ಎಂ. ತಾಹೀರ್, ಮನ್ಸೂರ್, ತಾಹ ರಹಿಂ ಹಾಗೂ ಮತ್ತಿತರ ಕಾರ್ಯರ್ತರು ಸೇವೆಯಲ್ಲಿ ಪಾಲ್ಗೊಂಡಿದ್ದರು.ನಾಪೆÇೀಕ್ಲು: ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಎದೆಗುಂದಬೇಡಿ. ನಿಮ್ಮೊಂದಿಗೆ ಕೇಂದ್ರ ಸರಕಾರ, ರಾಜ್ಯ ಸರಕಾರ, ಪೆÇಲೀಸ್ ಇಲಾಖೆ ಇದೆ ಎಂದು ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ದಿವಾಕರ್ ಹೇಳಿದರು.
ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆತಟ್ಟು ಕಾಲೋನಿಯ 30 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡಿದರು. ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯ ವಸ್ತುಗಳ ಕಿಟ್ ಪೂರೈಸಲಾಗುತ್ತಿದೆ ಎಂದರು. ಮಳೆಗಾಲ ಸೇರಿದಂತೆ ಮುಂದಿನ ದಿನಗಳಲ್ಲಿ ಯಾವದೇ ಸಂಕಷ್ಟ ಎದುರಾದರೂ ಇಲಾಖಾಧಿಕಾರಿಗಳನ್ನು, ಪಕ್ಕದ ಪೆÇಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದರು.
ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್. ಕಿರಣ್, ಪೆÇ್ರಬೆಷನರಿ ಎಸ್.ಐ. ಜಗದೀಶ್, ಸಿಬ್ಬಂದಿಗಳಾದ ಬಶೀರ್, ಮಹೇಶ್, ರಾಜೇಶ್, ಸಾರ್ವಜನಿಕರಾದ ಬಾಚಮಂಡ ಲವ ಚಿಣ್ಣಪ್ಪ ಮತ್ತಿತರರು ಇದ್ದರು.ಕೂಡಿಗೆ: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ಕೂಲಿ ಕಾರ್ಮಿಕರಿಗೆ ಆಯಾ ಗ್ರಾಮಗಳ ಕಡುಬಡವರಿಗೆ ಮತ್ತು ಪಡಿತರ ಕಾರ್ಡ್ ಇಲ್ಲದ ಜನರಿಗೆ ಪಡಿತರ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಸರಕಾರದ ಸೂಚನೆಯಂತೆ, ಅವರುಗಳು ನೀಡಿದ ಪಡಿತರ ವಸ್ತುಗಳನ್ನು ಪಂಚಾಯತಿಯಲ್ಲಿ ನೋಂದಣಿ ಮಾಡಿ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ರಾಜಶೇಖರ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ಅಂಗಡಿಗಳಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅಧ್ಯಕ್ಷೆ ಭವ್ಯ ಕಿಟ್ ವಿತರಣೆ ಸಂದರ್ಭ ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಸೋಮವಾರಪೇಟೆ: ಕೊರೊನಾ ಲಾಕ್‍ಡೌನ್‍ನಿಂದಾಗಿ ದೇವಸ್ಥಾನಗಳೂ ಮುಚ್ಚಲ್ಪಟ್ಟಿರುವದರಿಂದ ಸಂಕಷ್ಟಕ್ಕೆ ಸಿಲುಕಿರುವ ಅರ್ಚಕ ವರ್ಗಕ್ಕೆ ಸೋಮವಾರಪೇಟೆಯ ವರ್ತಕ, ಶ್ರೀ ವಿದ್ಯಾಗಣಪತಿ ದೇವಾಲಯ ಸಮಿತಿಯ ಖಜಾಂಚಿ ಹೃಷಿಕೇಶ್ ಅವರು ಅಗತ್ಯ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ಹೃಷಿಕೇಶ್ ಅವರ ಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಾಲ್ಗೊಂಡು ಅರ್ಚಕರಿಗೆ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭ ಅರ್ಚಕ ವರ್ಗಕ್ಕೆ ಸರ್ಕಾರದಿಂದ ಸವಲತ್ತು ಒದಗಿಸುವಂತೆ ಗಣಪತಿ ದೇವಾಲಯದ ಅರ್ಚಕ ಚಂದ್ರಶೇಖರ್ ಮನವಿ ಮಾಡಿದರು.
ಈ ಬಗ್ಗೆ ಸರ್ಕಾರದ ಗಮನ ಸೆಳೆದು ಕ್ರಮವಹಿಸುವದಾಗಿ ರಂಜನ್ ಭರವಸೆ ನೀಡಿದರು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ವಿವಿಧ ದೇವಾಲಯಗಳ 25 ಮಂದಿ ಅರ್ಚಕರುಗಳಿಗೆ ಆಹಾರ ಸಾಮಗ್ರಿಯ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಅಮಿತ್ ಹೃಷಿಕೇಶ್, ಕುಟುಂಬಸ್ಥರು ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಇಲ್ಲಿನ ಶ್ರೀ ಪರಂಜ್ಯೋತಿ ಅಮ್ಮ ಭಗವಾನ್ ಸೇವಾ ಸಮಿತಿಯಿಂದ ಸ್ಥಳೀಯ 60 ಟೈಲರ್ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು. ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ವಿತರಣೆ ಮಾಡಿದರು. ಸಮಿತಿಯ ಪ್ರಮುಖರಾದ ರಾಣಿ, ಇಂದಿರಾ, ಸಾಬಿತಾ, ತಾರಾ, ಮಾಚಯ್ಯ, ಸಿಂಗಿ ಸತೀಶ್ ಇದ್ದರು.ಕುಶಾಲನಗರ: ಸಂಕಷ್ಟದ ಸಂದರ್ಭ ಪ್ರತಿಯೊಬ್ಬರೂ ಸಹಾಯಹಸ್ತ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಅವರು ಕುಶಾಲನಗರದ ಉದ್ಯಮಿ ಉಮಾಶಂಕರ್ ಮತ್ತು ದಂಪತಿಗಳ ಮೂಲಕ ಸ್ಥಳೀಯ ಆಟೋ ಚಾಲಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದರೊಂದಿಗೆ ಕೊರೊನಾ ಮುಕ್ತ ಜಿಲ್ಲೆ ನಿರ್ಮಾಣವಾಗುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಸುಮಾರು 200ಕ್ಕೂ ಅಧಿಕ ಚಾಲಕರಿಗೆ ಕಿಟ್ ವಿತರಿಸಲಾಯಿತು. ಆಟೋ ಚಾಲಕರ ಸಂಘದ ಪ್ರಮುಖರಾದ ವಿ.ಪಿ. ನಾಗೇಶ್, ಉದ್ಯಮಿ ಎಂ.ಕೆ. ದಿನೇಶ್, ಪ.ಪಂ. ಸದಸ್ಯೆ ರೂಪಾ ಉಮಾಶಂಕರ್, ಅಮೃತ್‍ರಾಜ್, ಜಯವರ್ಧನ್, ಬಿಜೆಪಿ ಮುಖಂಡರಾದ ಎಂ.ಎನ್. ಕುಮಾರಪ್ಪ, ಕೆ.ಜಿ. ಮನು, ವೈಶಾಖ್, ಎಂ.ಎಂ. ಚರಣ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಎಂ.ವಿ. ನಾರಾಯಣ, ಎಂ.ಎಂ. ಚರಣ್, ವಿ.ಡಿ. ಪುಂಡರೀಕಾಕ್ಷ ಮತ್ತಿತರರು ಇದ್ದರು.ಚೆಟ್ಟಳ್ಳಿ: ಸೋಮವಾರಪೇಟೆಯ ಕಿಕ್ಕರಳ್ಳಿ ಮತ್ತು ಮಂಕ್ಯ ಗ್ರಾಮವು ನಗರದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರ ಇದ್ದು, ಇದು ಬೆಟ್ಟ-ಗುಡ್ಡದಿಂದ ಕೂಡಿದ ಕುಗ್ರಾಮವಾಗಿದೆ.
ಮಡಿಕೇರಿಯ ಕೊಡಗು ಸೇವಾ ಕೇಂದ್ರವು ಕಿಕ್ಕರಳ್ಳಿ ಮತ್ತು ಮಂಕ್ಯ ಗ್ರಾಮಕ್ಕೆ ತೆರಳಿ ಅಲ್ಲಿನ 44 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದರು. ಕೊಡಗು ಸೇವಾ ಕೇಂದ್ರದ ಸಂಚಾಲಕ ತೇಲಪಂಡ ಪ್ರಮೋದ್ ಸೋಮಯ್ಯ, ಪದಾಧಿಕಾರಿಗಳಾದ ಅಜ್ಜಿನಂಡ ತಮ್ಮು ಪೂವಯ್ಯ, ಬಿದ್ದಾಟಂಡ ತಮ್ಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಮಂದಪಂಡ ಸತೀಶ್ ಅಪ್ಪಚ್ಚು, ವನಾಂಡ ಮದನ್ ಮುಂತಾದವರು ಹಾಜರಿದ್ದರು.ಸೋಮವಾರಪೇಟೆ: ಅನಾರೋಗ್ಯದಿಂದ ಬಳಲುತ್ತಿದ್ದು, ಔಷಧಿ ಖರೀದಿಸಲೂ ಅಸಾಧ್ಯ ವಾದ ಪರಿಸ್ಥಿತಿ ನಿರ್ಮಾಣವಾಗಿ ರುವ ಬಗ್ಗೆ ಬೆಸೂರು ಗ್ರಾಮದ ಭಾಗೀರಥಿ ಎಂಬವರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕರೆ ಮಾಡಿ ಸಂಕಷ್ಟ ತೋಡಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಬೆಸೂರು ಗ್ರಾಮಕ್ಕೆ ತೆರಳಿ ಮಧುಮೇಹಕ್ಕೆ ಸಂಬಂಧಿಸಿದ ಇಂಜೆಕ್ಷನ್, ಇಂಜೆಕ್ಷನ್ ಸಿರೆಂಜ್‍ಗಳನ್ನು ವಿತರಿಸಿದರು. ಇದಕ್ಕೂ ಮೊದಲು ನಿಲುವಾಗಿಲು ಗ್ರಾಮದ ಜಲಜಾಕ್ಷಿ ಅವರೂ ಸಹ ಔಷಧಿ ಒದಗಿಸುವಂತೆ ಶಾಸಕರ ಗಮನ ಸೆಳೆದಿದ್ದರು. ಅವರ ಮನೆಗೂ ಔಷಧಿ ತಲುಪಿಸಲಾಗಿತ್ತು.