ಗೋಣಿಕೊಪ್ಪಲು, ಮೇ 9: ಜನಪ್ರತಿನಿಧಿಯೊಬ್ಬರು ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಬಂಧನಕ್ಕೆ ಒಳಗಾದ ಘಟನೆ ಕುಟ್ಟ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಡಿ.ಬೋಪಣ್ಣ ಬಂಧನಕ್ಕೆ ಒಳಗಾದ ವ್ಯಕ್ತಿ.ಶನಿವಾರ ಬೆಳಿಗ್ಗೆ 11.45.ಗಂಟೆ ಸಮಯದಲ್ಲಿ ಕುಟ್ಟ ವೃತ್ತ ನಿರೀಕ್ಷಕರಾದ ಎಸ್ ಪರಶಿವಮೂರ್ತಿ ನೇತೃತ್ವದ ತಂಡದಲ್ಲಿದ್ದ ಕುಟ್ಟ ಠಾಣೆಯ ಸಿಬ್ಬಂದಿ ಪ್ರಭಾಕರ ಅವರು ಕುಟ್ಟದ ಹಳೆಯ ಚೆಕ್ ಪೆÇೀಸ್ಟ್ ನ ಹತ್ತಿರ ಕುಟ್ಟ ದಿಂದ ಕೇರಳ ಹಾಗೂ ಕೇರಳದಿಂದ ಕುಟ್ಟದ ಕಡೆಗೆ ಯಾವುದೇ ವಾಹನ ಹಾಗೂ ವ್ಯಕ್ತಿಗಳು ಹೋಗದಂತೆ ಹಾಗೂ ಬರದಂತೆ ನೋಡಿಕೊಳ್ಳುವ ಕರ್ತವ್ಯದಲ್ಲಿದ್ದ ಸಂದರ್ಭ ಕುಟ್ಟದ ಕಡೆಯಿಂದ (ಕೆ.ಎ. 18.ಎನ್ .71 58) ರ ಕಪ್ಪುಬಣ್ಣದ ಟೊಯೋಟಾ ಈಟಿಎಸ್ ಕಾರೊಂದು ಕುಟ್ಟದ ಹಳೆಯ ಚೆಕ್ ಪೆÇೀಸ್ಟ್ ಹತ್ತಿರ ಬಂದಿದೆ. ಪೆÇಲೀಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿ ವಿಚಾರಿಸಿದಾಗ ಕೆ.ಬಾಡಗ ಗ್ರಾಮ ಪಂಚಾಯಿತಿಯ ಸಿ. ಡಿ. ಬೋಪಣ್ಣ ಎಂದು ಪರಿಚಯಿಸಿ ಕೊಂಡಿದ್ದಾರೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಬಯಸಿದಾಗ ಕೇರಳ ರಾಜ್ಯದ ನಿವಾಸಿಗಳಾದ ಮಟ್ಟನೈಲ್ ಅನುಪ್ ಹಾಗೂ ಕೆ.ಕೆ.ಆರ್.ನ ಸತ್ಯ ಎಂಬುದಾಗಿ ತಿಳಿಸಿದ್ದಾರೆ. ಲಾಕ್ ಡೌನ್ ಇದ್ದರೂ ತಾನು ಗೇಟ್ ದಾಟಿಸಿ ಹಳೆ ಚೆಕ್ ಪೆÇೀಸ್ಟ್ ಮೂಲಕ ಕಳುಹಿಸಿ ಕೊಡುವುದಾಗಿ ಹೇಳಿ ಚೆಕ್ ಪೆÇೀಸ್ಟ್ ಗೆ ಬೋಪಣ್ಣ ಕರೆತಂದಿದ್ದಾಗಿ ಹೇಳಿದ್ದಾರೆ.

ಜಿಲ್ಲಾಡಳಿತ ಆದೇಶವನ್ನು ಉಲ್ಲಂಘಿಸಿ ಕೇರಳದ ನಿವಾಸಿಗಳನ್ನು ಕುಟ್ಟದ ಹಳೆಯ ಚೆಕ್ ಪೆÇೀಸ್ಟ್ ಮೂಲಕ ಕೇರಳಕ್ಕೆ ದಾಟಿಸಲು ಕರೆದುಕೊಂಡು ಬಂದಿರುವ ಹಿನ್ನೆಲೆಯಲ್ಲಿ ಪೆÇಲೀಸರು ಸಿ.ಡಿ. ಬೊಪ್ಪಣ್ಣ ಅವರ ವಿರುದ್ದ ಪ್ರಕರಣ ದಾಖಲಾಗಿಸಿ ಬಂಧಿಸಿ, ಕಾರ್ಮಿಕ ರೊಂದಿಗೆ ಕ್ವಾರಂಟೈನ್‍ಗೆ ಒಳಪಡಿಸಿ ದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೆÇಲೀಸ್ ಅಧೀಕ್ಷಕಿ ಡಾ.ಸುಮನ್ ಹಾಗೂ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಯಿತು.

- ಹೆಚ್.ಕೆ.ಜಗದೀಶ್