ಪೆರಾಜೆ, ಮೇ 9: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅತ್ತಿಗೆ ಮತ್ತು ಆಕೆಯ ಮಗ ಸೇರಿ ಮೈದುನನನ್ನು ಕೊಲೆಮಾಡಿದ ಘಟನೆ ನಿನ್ನೆ ತಡ ರಾತ್ರಿ ಪೆರಾಜೆಯಲ್ಲಿ ನಡೆದಿದೆ. ಇಲ್ಲಿಯ ಪೀಚೆ ಮನೆ ದಿ. ಮುದ್ದಯ್ಯ ಅವರ ಪುತ್ರ ಉತ್ತರ ಕುಮಾರ್(33) ಕೊಲೆ ಯಾದ ವ್ಯಕ್ತಿ. ಪೀಚೆಮನೆ ದಿವಂಗತ ಕೇಶವ ಅವರ ಪತ್ನಿ ತಾರಿಣಿ(42) ಮತ್ತು ಮಗ ಧರಣಿಕುಮಾರ್ (18) ಆರೋಪಿಗಳು. ಆಸ್ತಿ ವಿಷಯದಲ್ಲಿ ತನ್ನ ಮನೆಗೆ ಪಾನಮತ್ತನಾಗಿ ಬಂದ ಮೈದುನನನ್ನು ಅತ್ತಿಗೆ ಮತ್ತು ಆಕೆಯ ಮಗ ಸೇರಿ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಾರಿಣಿ ಮತ್ತು ಮಗ ಧರಣಿಕುಮಾರ್ ಎಂಬ ವರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.ಪೆರಾಜೆ ಗ್ರಾಮದ ಪೀಚೆಮನೆ ತಾರಿಣಿ ಮತ್ತು ಉತ್ತರಕುಮಾರ ಎಂಬವರ ಆಸ್ತಿ ಅಕ್ಕಪಕ್ಕದಲ್ಲಿ ಇದ್ದು, ಇವರೊಳಗೆ ಆಸ್ತಿ ತಕರಾರು ಇತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ಕಳೆದ ರಾತ್ರಿ ಉತ್ತರ ಕುಮಾರ್ ಪಾನಮತ್ತನಾಗಿ ತಾರಿಣಿ ಮನೆಯ ಪಕ್ಕದಿಂದ ಬೈಯ್ಯುತ್ತಾ ಮನೆಯಂಗಳಕ್ಕೆ ಬಂದು ಮನೆ ನುಗ್ಗಲು ಪ್ರಯತ್ನ ಪಟ್ಟಾಗ ತಾರಿಣಿ ಮತ್ತು ಮಗ ಧರಣಿಕುಮಾರ ಸೇರಿ ಕತ್ತಿಯಿಂದ ಕಡಿದಿರುವದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳು ಉತ್ತರಕುಮಾರನ ತಲೆ, ಕೈ, ಕಾಲು, ಕುತ್ತಿಗೆ ಭಾಗಕ್ಕೆ ಕಡಿದಿದ್ದು ತೀವ್ರವಾಗಿ ಗಾಯಗೊಂಡ ಅವರು ಮನೆಯ ಪಕ್ಕದ ತಮ್ಮನ ತೋಟದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕಾಗಮಿಸಿದ ಮಡಿಕೇರಿ ಗ್ರಾಮಾಂತರ ಪೆÇಲೀಸರು ಆರೋಪಿಗಳಾದ ತಾರಿಣಿ ಮತ್ತು ಧರಣಿಕುಮಾರನನ್ನು ಬಂಧಿಸಿದ್ದಾರೆ.

ಈ ಹಿಂದೆ ತಾರಿಣಿಯವರ ಮನೆಯಲ್ಲೇ ತಯಾರಿಸಿದ ಚಹಾ ಸೇವಿಸಿ ತಾರಿಣಿ ಸೇರಿದಂತೆ ಅವರ ಸಂಬಂಧಿಕರಿಬ್ಬರು ಅಸ್ವಸ್ಥರಾಗಿ ದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗಿದ್ದು, ಚಹಾದಲ್ಲಿ ವಿಷ ಬೆರೆಸಿದ ಆರೋಪವನ್ನು ಉತ್ತರ ಕುಮಾರ್ ಮೇಲೆ ಹೊರಿಸಿ ತಾರಿಣಿ ಪೊಲೀಸ್ ದೂರು ನೀಡಿದ್ದ ರೆನ್ನಲಾಗಿದೆ.- ಕಿರಣ್ ಕುಂಬಳಚೇರಿ