ಕರಿಕೆ, ಮೇ 10 : ಕೊರೊನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಸಂಪರ್ಕ ರಸ್ತೆ ಬಂದ್ ಮಾಡಲು ರಾಜ್ಯ ಸರಕಾರ ಆದೇಶ ಹೊರಡಿಸಿದ ಪರಿಣಾಮ ಕರಿಕೆ, ಕುಟ್ಟ, ಮಾಕುಟ್ಟ ಈ ಮೂರು ಅಂತರ್ ರಾಜ್ಯ ಗಡಿಯಲ್ಲಿ ಮಣ್ಣು ಸುರಿದು ರಸ್ತೆ ಬಂದ್ ಮಾಡಿ ಚೆಕ್ ಪೆÇೀಸ್ಟ್ ಅಳವಡಿಸಿ ಬಿಗಿ ಪೆÇಲೀಸ್ ಭದ್ರತೆ ಮಾಡಲಾಗಿತ್ತು.ಆದರೆ ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷನ್‍ಗಾಗಿ ಹಾದುಹೋಗಿ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್ ಇದ್ದರೂ ಕೂಡ ಮಂಙನಡ್ಕ ರಸ್ತೆ ಮೂಲಕ ಕದ್ದು ಮುಚ್ಚಿ ನಿರಂತರವಾಗಿ ವಾಹನಗಳು ಓಡಾಡುವುದನ್ನು ಪತ್ತೆಹಚ್ಚಿದ ಭಾಗಮಂಡಲ ಠಾಣಾಧಿಕಾರಿ ಮಹದೇವ ಹಾಗೂ ಸಿಬ್ಬಂದಿ ಸ್ಥಳಕ್ಕೆ ಜೆಸಿಬಿ ಯಂತ್ರದ ಮೂಲಕ ರಸ್ತೆಗೆ ಮಣ್ಣು ಸುರಿದು ಸಂಪೂರ್ಣವಾಗಿ ಬಂದ್ ಮಾಡಲಾಯಿತು.