ಸುಂಟಿಕೊಪ್ಪ, ಮೇ 10: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಓಮ್ನಿವ್ಯಾನ್ ಮೈಗಲ್ಲಿಗೆ ಡಿಕ್ಕಿಗೊಂಡು ಫ್ಯಾನ್ಸಿ ಅಂಗಡಿಗೆ ನುಗ್ಗಿದ ಘಟನೆಯೊಂದು ವರದಿಯಾಗಿದೆ.

ಮಡಿಕೇರಿ ಕಡೆಯಿಂದ ಆಗಮಿಸಿ ಕನ್ನಡ ವೃತ್ತದ ಮೂಲಕ ಮಾದಾಪುರ ರಸ್ತೆ ಕಡೆಗೆ ಚಲಿಸುತ್ತಿದ್ದ ಮಾರುತಿ ಓಮ್ನಿ (ಕೆಎ12 0055)ವ್ಯಾನ್ ಚಾಲಕ ನಿಯಂತ್ರಣ ತಪ್ಪಿದೆ. ರಾಜ್ಯ ಹೆದ್ದಾರಿ ಬದಿಯ ಮೈಲಿಗಲ್ಲಿಗೆ ಡಿಕ್ಕಿ ಹೊಡೆದಿದ್ದು ವಾಹನವು ನಿಯಂತ್ರಣಕ್ಕೆ ಬಾರದೆ ಫ್ಯಾನ್ಸಿ ಅಂಗಡಿಗೆ ಮುಂಭಾಗದಲ್ಲಿ ನಿಂತಿದ್ದ 2 ದ್ವಿಚಕ್ರ ವಾಹನಗಳಿಗೂ ಡಿಕ್ಕಿಗೊಂಡು ಅಂಗಡಿಯ ಮೆಟ್ಟಿಲು ಮೇಲೆ ನಿಂತಿತು. ಅದೃಷ್ಟವಶಾತ್ ಈ ಸಂದರ್ಭ ಅಂಗಡಿ ಮುಂಭಾಗದಲ್ಲಿ ಯಾರು ಇಲ್ಲದಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ. ದ್ವಿಚಕ್ರ ವಾಹನಗಳು ಮಾತ್ರ ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿದವು.