ಮಡಿಕೇರಿ, ಮೇ 10: ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ರಸ್ತೆ ಅಭಿವೃದ್ಧಿ ಮತ್ತು ಡಾಮರೀಕರಣ, ಊರುಬೈಲು ಸೇತುವೆ ಕಾಮಗಾರಿಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಕಾಮಗಾರಿಗಳನ್ನು ಅತೀ ಜರೂರಾಗಿ ಮಾಡಬೇಕೆಂಬ ಸ್ಥಳೀಯ ನಾಯಕರ ಬೇಡಿಕೆಯಂತೆ ಶಾಸಕ ಕೆ.ಜಿ. ಬೋಪಯ್ಯ ಶೀಘ್ರ ಕಾಮಗಾರಿ ಪ್ರಾರಂಭಕ್ಕೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ದಬ್ಬಡ್ಕ ರಸ್ತೆ ಮತ್ತು ಊರುಬೈಲು ಸೇತುವೆ ಕಾಮಗಾರಿಗಳನ್ನು ವೀಕ್ಷಿಸಿ, ಮಾರ್ಗದರ್ಶನ ನೀಡಿದರು. ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷ ಅನಂತ್ ಎನ್.ಸಿ., ನಿರ್ದೇಶಕ ದಿನೇಶ್ ಸಣ್ಣಮನೆ, ಗುತ್ತಿಗೆದಾರರಾದ ಬಾಲನ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.