ಸುಂಟಿಕೊಪ್ಪ, ಮೇ 10: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಜೌಷಧಿ ಸಸ್ಯಗಳ ಉದ್ಯಾನವನ ನಿರ್ಮಿಸಲು ಕ್ರಮ ಕೈಗೊಂಡಿರುವುದಾಗಿ ಪಿಡಿಓ ವೇಣುಗೋಪಾಲ್ ತಿಳಿಸಿದ್ದಾರೆ.
ಗ್ರಾ.ಪಂ.ಗೆ ಟಾಟಾ ಎಸ್ಟೇಟ್ ವತಿಯಿಂದ 2 ಎಕರೆ ಜಾಗವನ್ನು ನೀಡಲಾಗಿದ್ದು, ಪಂಚಾಯಿತಿ ಖಾತೆಗೆ ವರ್ಗಾಯಿಸಲಾಗಿದ್ದು ಅದರಲ್ಲಿ 1 ಎಕರೆ ಜಾಗದಲ್ಲಿ ಸದುಪಯೋಗಪಡಿಸಿಕೊಳ್ಳಲು ಜೌಷಧಿಯ ಗಿಡಗಳನ್ನು ನೆಟ್ಟು ಪಾರ್ಕ್ ನಿರ್ವಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಜೌಷಧೀಯ ಗಿಡಗಳಾದ ತುಳಸಿ, ದೊಡ್ಡಪತ್ರೆ, ತುಂಬೆ, ನರ್ವೀಸ ಇನ್ನಿತರ ಔಷಧೀಯ ಗಿಡಗಳನ್ನು ನೆಟ್ಟು ಪೊಷಿಸಲಾಗುವುದು ಇದರ ರಕ್ಷಣೆಯ ಜವಾಬ್ದಾರಿ ಗ್ರಾಮಸ್ಥರದ್ದಾಗಿದೆ ಎಂದು ಪಿಡಿಓ ವೇಣುಗೋಪಾಲ್ ತಿಳಿಸಿದರು.