ಗೋಣಿಕೊಪ್ಪಲು, ಮೇ 9: ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವ ನೆಪದಲ್ಲಿ ತೆರಳಿದ ಯುವಕರಿಬ್ಬರು ಮಾತಿಗೆ, ಮಾತು ಬೆಳೆದು ವೃದ್ಧರೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಬಿ.ಶೆಟ್ಟಿಗೇರಿಯಲ್ಲಿ ನಡೆದಿದೆ. ಮೃತ ದುರ್ದೈವಿ ಜೇನುಕುರುಬರ ರಾಜು (65) ಎಂದು ತಿಳಿದು ಬಂದಿದ್ದು, ಗೋಣಿಕೊಪ್ಪ ಪೆÇಲೀಸರು ಆರೋಪಿಗಳಾದ ಎರವರ ರವಿ (22) ಹಾಗೂ ವಿನೋದ್ (25) ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.ಘಟನೆ ಹಿನ್ನೆಲೆ : ಜೇನು ಕುರುಬರ ರಾಜು ಎಂಬ ಕಾರ್ಮಿಕ ಕಳೆದ 3 ವರ್ಷಗಳಿಂದ ಕಾಳೆಂಗಡ ಪ್ರಭು ಅಚ್ಚಯ್ಯ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಮಾಲೀಕರ ಲೈನ್ ಮನೆಯಲ್ಲಿ ವಾಸವಿದ್ದ. ತೋಟದ ಮಾಲೀಕರು ಬೆಂಗಳೂರಿನಲ್ಲಿ ವಾಸವಿದ್ದರು.ಸಮೀಪದ ಮತ್ತೊಂದು ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರವಿ ಎಂಬಾತನಿಗೆÀ ವೃದ್ಧ ರಾಜುವಿನೊಂದಿಗೆ ಸ್ನೇಹಚಾರವಿತ್ತು ಎನ್ನಲಾಗಿದೆ. ಆಗಿಂದಾಗ್ಗೆ ರವಿ ರಾಜು ವಾಸ ಮಾಡುವ ಮನೆಗೆ ಬರುತ್ತಿದ್ದ ಈ ಮಧ್ಯೆ ಮಾಲೀಕರಿಲ್ಲದ ತೋಟಕ್ಕೆ ಬರದಂತೆ ರಾಜು ರವಿಗೆ ಎಚ್ಚರಿಕೆ ನೀಡಿದ್ದ.ಇದರಿಂದ ರವಿ ವೃದ್ಧ ರಾಜುವಿನ ಮೇಲೆ ಅಸಮಾಧಾನ ಗೊಂಡಿದ್ದ. ಮೇ 7 ರಂದು ಬಿ.ಶೆಟ್ಟಿಗೇರಿ ಜಂಕ್ಷನ್‍ನ ಬಸ್ ತಂಗುದಾಣ ಸಮೀಪ ಇಬ್ಬರ ನಡುವೆ ಕ್ಷುಲ್ಲಕ ವಿಚಾರದಲ್ಲಿ ಮಾತಿಗೆ, ಮಾತು ಬೆಳೆದಿದೆ, ಈ ಸಂದರ್ಭ ರಾಜು ನಮ್ಮ ತೋಟಕ್ಕಾಗಲಿ, ಲೈನ್ ಮನೆಗಾಗಲಿ ಸುಳಿಯಬೇಡ ಎಂದು ರವಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾನೆ ನಂತರದಲ್ಲಿ ರಾಜು ತನ್ನ ಮನೆಗೆ ತೆರಳಿದ್ದಾನೆ.ರಾತ್ರಿಯ ಸಮಯದಲ್ಲಿ ರವಿ ತನ್ನ ಸ್ನೇಹಿತನಾದ ವಿನೋದ್ ಎಂಬಾತ ನೊಂದಿಗೆ (ಮೊದಲ ಪುಟದಿಂದ) ಮತ್ತೆ ರಾಜುವಿನ ಲೈನ್ ಮನೆಗೆ ತೆರಳಿ ಮನೆಯಲ್ಲಿದ್ದ ರಾಜು ಅನ್ನು ಮನೆಯಿಂದ ಹೊರಕ್ಕೆ ಕರೆದು ಕ್ಷಮೆ ಹೇಳಿದ್ದಾನೆ. ಈ ಸಂದರ್ಭ ರಾಜು ಮತ್ತೆ, ಮತ್ತೆ ನನ್ನ ಬಳಿ ಬಂದು ತೊಂದರೆ ಕೊಡಬೇಡ ಈ ವಿಚಾರವನ್ನು ಮಾಲೀಕರ ಬಳಿ ಹೇಳುತ್ತೇನೆ ಎಂದು ಗದರಿಸಿದ್ದಾನೆ. ಈತನ ಮಾತಿಗೆ ಕೋಪಗೊಂಡ ವಿನೋದ್ ಅಲ್ಲೆ ಇದ್ದ ಬಡಿಗೆಯಿಂದ ವೃದ್ಧನ ತಲೆಯ ಭಾಗಕ್ಕೆ ಬಾರಿಸಿದ್ದಾನೆ. ಇದರಿಂದ ನಿತ್ರಾಣಗೊಂಡ ರಾಜು ಸ್ಥಳದಲ್ಲೆ ಕುಸಿದು ಬಿದ್ದಿದ್ದಾನೆ.

ಆರೋಪಿ ರವಿ ಲೈನ್ ಮನೆಯಲ್ಲಿದ್ದ ಕಪಾತ್ ಕತ್ತಿಯನ್ನು ತಂದು ವೃದ್ಧ ರಾಜುವಿನ ಕುತ್ತಿಗೆ ಕಡಿದಿದ್ದಾನೆ. ನಂತರ ಆರೋಪಿತರಿಬ್ಬರು ಮೃತ ದೇಹವನ್ನು ಸಮೀಪದ ಕೆರೆಯಲ್ಲಿ ಬಿಸಾಡುವ ಪ್ರಯತ್ನ ಮಾಡಿದ್ದರಾದರೂ ಭಯಗೊಂಡು ಅಲ್ಲಿಂದ ಜಾಗ ಖಾಲಿಮಾಡಿದ್ದಾರೆ. ಮುಂಜಾನೆ ತೋಟದ ಚಾಲಕ ಬಂದು ಕಾರ್ಮಿಕನನ್ನು ಕರೆಯುವ ಸಂದರ್ಭ ವಿಷಯ ಬೆಳಕಿಗೆ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಣಿಕೊಪ್ಪ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳಾದ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು ಆರೋಪಿಗಳನ್ನು ಬಂಧಿಸಿದರು. ಘಟನಾ ಸ್ಥಳಕ್ಕೆ ಕೊಡಗು ಎಸ್. ಪಿ.ಸುಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಡಿವೈಎಸ್‍ಪಿಜಯಕುಮಾರ್, ಸಿಪಿಐರಾಮರೆಡ್ಡಿ ಇದ್ದರು. ಸಿಪಿಐ ರಾಮರೆಡ್ಡಿ, ಮುಂದಾಳತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್.ಐ.ಸುರೇಶ್ ಬೋಪಣ್ಣ, ಎಎಸ್‍ಐ ಮೇದಪ್ಪ, ಸಿಬ್ಬಂದಿಗಳಾದ ಮಣಿಕಂಠ, ಕೃಷ್ಣ, ಪೂವಣ್ಣ, ಕೃಷ್ಣಮೂರ್ತಿ, ಮಜೀದ್ ಮುಂತಾದವರು ಹಾಜರಿದ್ದರು. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದ ಪೆÇಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- ಹೆಚ್.ಕೆ.ಜಗದೀಶ್