ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ವನ್ನು ಎದುರಿಸುವ ನಿಟ್ಟಿನಲ್ಲಿ ಇಡೀ ಜಗತ್ತೇ ಒಂದಾಗಿ ನಿಂತಿದೆ. ಕೊಡಗು ಜಿಲ್ಲೆಯಲ್ಲಿಯೂ ಕಳೆದ 50 ದಿನಗಳಿಂದ ಕೊರೊನಾ ವಿರುದ್ದ ಜಿಲ್ಲಾಡಳಿತ ಸಮರ ಸಾರುತ್ತಲೇ ಇದೆ. ಕೊಡಗು ಜಿಲ್ಲಾಧಿಕಾರಿ ಕಛೇರಿಯಲ್ಲಿ ಸ್ಥಾಪಿತವಾಗಿರುವ ಕೋವಿಡ್-19 ಕಂಟ್ರೋಲ್ ರೂಮ್ ಕೊಡಗಿನ ಜನತೆಯ ವಿವಿಧ ಸಮಸ್ಯೆಗಳ ಪರಿಹಾರದ ಕೇಂದ್ರ ಸ್ಥಾನದಂತಾಗಿದೆ. ದಿನಕ್ಕೆ ನೂರಾರು ಕರೆಗಳಿಗೆ ಸ್ಪಂದಿಸುತ್ತಾ ಕೊಡಗಿನ ಜನತೆಯ ನಿಜವಾದ ಸಹಾಯವಾಣಿ ಯಂತಾಗಿದೆ 1077.
‘ಹೇಗಿದೆ ಕೋವಿಡ್-19 ಡಿಸಿ ಕಂಟ್ರೋಲ್ ರೂಮ್ ?’ ‘ಹಲೋ... ಹಲೋ...ಇದು 1077 ?’ ‘ಎಸ್. ಸರ್.. ಏನಾಗಬೇಕಿತ್ತು ಹೇಳಿ ?’
‘ನನ್ನ ಪತ್ನಿ ಗರ್ಭಿಣಿಯಾಗಿದ್ದು ಮುಂದಿನ ವಾರ ಹೆರಿಗೆಯಾಗಬೇಕಿದೆ. ಆದ್ರೆ ಆಕೆಯ ತವರು ಮನೆ ಮತ್ತು ವೈದ್ಯರಿರೋದು ಕೇರಳದ ಕೊಲ್ಲಂನಲ್ಲಿ. ಅಲ್ಲಿಗೆ ಪ್ರಯಾಣಿಸಲೇಬೇಕಾಗಿದೆ. ಹೇಗೆ ಹೋಗೋದು ಹೇಳಿ ?’ ಇಂಥ ಪ್ರಶ್ನೆಯೊಂದು ಡಿಸಿ ಕೋವಿಡ್-19 ಕಂಟ್ರೋಲ್‍ರೂಮ್‍ಗೆ ಬಂದಾಗ ಅಲ್ಲಿಂದ ಸಮನ್ವಯ ಕಾರ್ಯ ಪ್ರಾರಂಭವಾಗುತ್ತದೆ. ಜಿಲ್ಲಾಧಿಕಾರಿ, ಪೆÇಲೀಸ್ ವರಿಷ್ಠಾಧಿüಕಾರಿ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಚೆಕ್‍ಪೆÇೀಸ್ಟ್ ಸಿಬ್ಬಂದಿ, ಹೀಗೆ ಕೊಡಗಿನಿಂದ ಕೊಲ್ಲಂವರಗಿನ ವಿವಿಧ ಇಲಾಖೆಗಳ ನಡುವೇ ಕಂಟ್ರೋಲ್‍ರೂಮ್ ಸಮನ್ವಯ ಕಲ್ಪಿಸುತ್ತದೆ.
ಕೆಲವೇ ಗಂಟೆಗಳಲ್ಲಿ ಪರಿಹಾರ ಸಿಗುತ್ತದೆ. ಮುಂದಿನ ದಿನವೇ ಕೊಡಗಿನಿಂದ ಆ್ಯಂಬುಲೆನ್ಸ್ ಮೂಲಕ ಗರ್ಭಿಣಿ ಕೊಲ್ಲಂಗೆ ಪಯಣಿಸುತ್ತಾಳೆ. ಮತ್ತೆ ಕೊಲ್ಲಂನಿಂದ ಕರೆ ಬರುತ್ತದೆ. ನಾವು ಸುರಕ್ಷಿತವಾಗಿ ಕೊಲ್ಲಂ ತಲುಪಿದ್ದೇವೆ. ವೈದ್ಯರೂ ಪರೀಕ್ಷೆ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಥ್ಯಾಂಕ್ಯು ಕೊಡಗು ಡಿಸಿ ಕಂಟ್ರೋಲ್‍ರೂಮ್ ವೆರಿ ಕೈಂಡ್ ಆಫ್ ಯು. ಈ ಸಾರ್ಥಕ ಕ್ಷಣಗಳನ್ನು ಸಂಭ್ರಮಿಸಬೇಕು ಅನ್ನುವಷ್ಟರಲ್ಲಿಯೇ ಮತ್ತೆ ಕರೆಗಳ ಸುರಿಮಳೆ.
ಹಲೋ 1077. ನಾನು ಗೋವಾಕ್ಕೆ ಹೋಗಬೇಕು, ಏನು ಮಾಡಬೇಕು. ಹಲೋ, ನಾನು ಬೆಳೆದ ತರಕಾರಿ ಹಾಳಾಗುತ್ತಿದೆ. ಯಾರಲ್ಲಿ ಹೇಳಬೇಕು. ಹಲೋ ನನ್ನ ತೋಟದ ಕಾರ್ಮಿಕರು ಬಿಹಾರಕ್ಕೆ ಹೋಗಬೇಕು. ಹಲೋ, ಮಂಗಳೂರಿಗೆ ಹೋಗೋದು ಹೇಗೆ ? ಹಲೋ, ಪಾಸ್‍ಬೇಕು. ಯಾವುದೇ ಸಮಸ್ಯೆಯ ಕರೆಯೂ ಕೇವಲ 12 ಗಂಟೆಯಿಂದ 24 ಗಂಟೆಯೊಳಗೆ ಪರಿಹಾರ ವಾಗಲೇ ಬೇಕು. ಯಾವುದೇ ಸಮಸ್ಯೆಯೂ 1 ದಿನಕ್ಕಿಂತ ಹೆಚ್ಚು ದಿನ ಪೆಂಡಿಂಗ್ ಇರಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಂಟ್ರೋಲ್ ರೂಮ್ ಸಮರ ಸೈನಿಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದು ಪಾಲನೆಯಾಗು ತ್ತಲೇ ಇದ್ದು, ಈವರೆಗೂ ಸಾವಿರಾರು ಮಂದಿಗೆ ಕಂಟ್ರೋಲ್ ರೂಮ್ ಸದುಪಯೋಗವಾಗಿದೆ. ಕಂಟ್ರೋಲ್‍ರೂಮ್ ಎಂಬ ವಾರ್‍ರೂಮ್‍ನಲ್ಲಿ ನಾಲ್ಕು ವಿಭಾಗಗಳಿದೆ. ಮೊದಲ ತಂಡ 8550001077 ಸಂಖ್ಯೆಗೆ ಬರುವ ವಾಟ್ಸಪ್ ಸಂದೇಶಗಳನ್ನು ಗಮನಿಸುತ್ತಿರುತ್ತದೆ. ವಾಟ್ಸಾಪ್ ಮೂಲಕ ಬರುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುವಲ್ಲಿ ಈ ತಂಡ ಕಾರ್ಯೋನ್ಮುಖವಾಗಿದೆ. ಮತ್ತೊಂದು ತಂಡ ದೂರವಾಣಿ ಕರೆ ಸ್ವೀಕರಿಸುತ್ತಾ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದೆ. ಮೂರನೇ ತಂಡ ಸಾಮಾಜಿಕ ಜಾಲತಾಣದ ರೂಪುರೇಷೆ ನೋಡಿಕೊಳ್ಳುತ್ತಿದೆ. ಜಿಲ್ಲಾಡಳಿತ ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಗಳ ಮಾಹಿತಿ ಯನ್ನು ಸಾಮಾಜಿಕ ಜಾಲತಾಣಕ್ಕೆ ನೀಡಲು ಡಿಸೈನ್ ರಚಿಸುತ್ತದೆ. ನಾಲ್ಕನೇ ತಂಡವಾದ ಮೀಡಿಯಾ ಸೆಲ್ ವದಂತಿ ಮತ್ತು ಸುಳ್ಳು ಸುದ್ದಿಗಳ ಮೇಲೆ ಕಣ್ಣಿಟ್ಟಿರುತ್ತದೆ. ಫೇಕ್‍ನ್ಯೂಸ್ ಪತ್ತೆ ಮಾಡಿ ವದಂತಿಗಳಿಂದ ಜನರು ಗೊಂದಲ ಕ್ಕೊಳಗಾಗದಂತೆ ಈ ತಂಡ ನೋಡಿಕೊಳ್ಳುತ್ತಿದೆ. ಫೇಕ್ ನ್ಯೂಸ್ ಹಬ್ಬಿಸುವವರಿಗೆ ಸೂಕ್ತ ಎಚ್ಚರಿಕೆ ನೀಡುವಲ್ಲಿ ತಂಡ ಕಾರ್ಯೋನ್ಮುಖವಾಗಿದೆ. ಹಗಲೂ ರಾತ್ರಿ ಬಿಡುವಿಲ್ಲದಂತೆ 15 ಜನರ ಈ ತಂಡ ಕಾರ್ಯನಿರ್ವಹಿಸುತ್ತಿದ್ದು ಈ ತಂಡಕ್ಕೆ ವಿಕೋಪ ಕಾರ್ಯಪಡೆಯ ಮುಖ್ಯಸ್ಥ ಅನನ್ಯ ಮತ್ತು ಡಿಡಿಎಲ್ ಆರ್ ನ ಶ್ರೀನಿವಾಸ್ ಉಸ್ತುವಾರಿಯಿದೆ. 1077ಗೆ ಬರುವ ಪ್ರತಿಯೊಂದು ದೂರವಾಣಿ, ಕರೆ, ಸಾಮಾಜಿಕ ಜಾಲತಾಣದ ಸಂದೇಶವೂ ಈ ಕಂಟ್ರೋಲ್‍ರೂಮ್‍ನಲ್ಲಿ ಸಮರ್ಪಕವಾಗಿ ದಾಖಲಾಗುತ್ತಿದೆ. ಆಹಾರ ಕಿಟ್ ವಿತರಣೆ, ಬಸ್ ಸಂಚಾರ ವ್ಯವಸ್ಥೆ, ಚೆಕ್ ಪೆÇೀಸ್ಟ್ ಮೂಲಕ ಸಂಚಾರ, ವಲಸೆ ಕಾರ್ಮಿಕರನ್ನು ಅವರೂರಿಗೆ ಕಳುಹಿಸುವುದು, ಅಂತರ ಜಿಲ್ಲಾ, ಅಂತರ ರಾಜ್ಯಕ್ಕೆ ಜನರ ಸಂಚಾರ, ಹೊರಜಿಲ್ಲೆಯಿಂದ ಕೊಡಗಿಗೆ ಜನರ ಪ್ರವೇಶ. ಹೀಗೆ ಒಂದೇ ಎರಡೇ ಹತ್ತಾರು ಕಾರ್ಯಕ್ಷೇತ್ರಗಳಲ್ಲಿ ಕೋವಿಡ್-19 ಕಂಟ್ರೋಲ್‍ರೂಮ್ ಕಾಯೋನ್ಮುಖವಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೂ ಕೂಡ ಕಂಟ್ರೋಲ್‍ರೂಮ್‍ನ ಮಾಹಿತಿಯ ಪ್ರಯೋಜನ ಪಡೆದಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ವೈದ್ಯಕೀಯ ತುರ್ತು ಸಂದರ್ಭ ಆ್ಯಂಬುಲೆನ್ಸ್ ಕೂಡ ಒದಗಿಸಲಾಗಿದೆ. ಕೊಡಗಿನಲ್ಲಿ ಕೋವಿಡ್-19 ಸಮಸ್ಯೆ ಪರಿಹಾರದ ಜತೆಜತೆಗೆಯೇ ವಿವಿಧ ಇಲಾಖೆಗಳ ಪ್ರಮುಖರಿಂದ ಫೆÇೀನ್‍ಇನ್ ಕಾರ್ಯಕ್ರಮ ಆಯೋಜಿಸುತ್ತಾ ಜನರ ಸಮಸ್ಯೆಗಳಿಗೆ ಆಯಾ ಇಲಾಖಾಧಿಕಾರಿಗಳಿಂದಲೇ ಪರಿಹಾರ ಒದಗಿಸುವ ವಿನೂತನ ಪ್ರಯತ್ನ ಕೂಡ ಭರ್ಜರಿ ಯಶಸ್ಸು ಕಂಡಿದೆ. ಆರೋಗ್ಯ, ಶಿಕ್ಷಣ, ಪಂಚಾಯತ್ ರಾಜ್, ಆಹಾರ ಸರಬರಾಜು, ಸ್ಥಳೀಯ ಸಂಸ್ಥೆಗಳು, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ಹಿರಿಯ ನಾಗರಿಕರು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಮುಖರು ಫೆÇೀನ್‍ಇನ್ ಕಾರ್ಯಕ್ರಮ ದಲ್ಲಿ ಜಿಲ್ಲೆಯ ಮೂಲೆ ಮೂಲೆಗಳ ಜನರ ಕರೆಗೆ ಸ್ಪಂದಿಸಿದ್ದಾರೆ. ಸೂಚಿತ ದಿನಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ 1077. ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವ ವ್ಯವಸ್ಥೆಯು ಶ್ಲಾಘನೀಯವಾದದ್ದು.
ಕೊನೇ ಹನಿ: ಕಂಟ್ರೋಲ್‍ರೂಮ್‍ಗೆ ಬರುವ ಕೆಲವು ಕರೆಗಳು ಸ್ವಾರಸ್ಯಕರ ವಾಗಿರುತ್ತದೆ. ಯಾವಾಗ ಲಾಕ್‍ಡೌನ್ ಮುಗಿಯುತ್ತೆ, ನಂಗೆ ಮದುವೆ ನಿಶ್ಚಯ ವಾಗಿದೆ. ಮದುವೆಯಾಗಲು ಸಾಧ್ಯವೇ ಎಂಬ ಕರೆ ಒಂದಾದರೆ, ಮದ್ಯದಂಗಡಿ ಯಲ್ಲಿ ಬೆಲೆ ಜಾಸ್ತಿ ಮಾಡುತ್ತಿದ್ದಾರೆ. ಕಮ್ಮಿ ಮಾಡಿಸಿ ಎಂಬ ಒತ್ತಾಯ ಮತ್ತೊಂದು. ವಲಸೆ ಕಾರ್ಮಿಕರ ಪಾಸ್‍ಗಳಿಗೆ ಸಂಬಂಧಿಸಿದ ಕರೆಗಳೇ ಈವರೆಗೂ ಹೆಚ್ಚಿನದ್ದಾಗಿದೆ. ನೆನಪಿಡಿ. ಕೊಡಗು ಜಿಲ್ಲೆಯ ನಾಗರಿಕರು ತಮ್ಮೆಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ 1077 ಸಂಖ್ಯೆಯನ್ನು ಸಂಪರ್ಕಿಸಿ. ನಾಲ್ಕು ಲೈನ್ ಗಳಲ್ಲಿ ಈ ಸಂಖ್ಯೆ ಕಾರ್ಯನಿರ್ವಹಿಸುತ್ತಿದ್ದು ಹೀಗಾಗಿ ಎಷ್ಟೇ ಜನ ಕರೆ ಮಾಡಿದರೂ ಸುಲಭವಾಗಿ ಸಂಪರ್ಕ ಸಾಧ್ಯವಾಗಲಿದೆ. ಕೊಡಗಿನ ಹೊರಜಿಲ್ಲೆಯ ಜನತೆ ಕೊಡಗಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ತಾವಿರುವ ಸ್ಥಳದಿಂದ ಕರೆ ಮಾಡಲು 08272-1077 ಸಂಖ್ಯೆ ಸಂಪರ್ಕಿಸಬೇಕಾಗಿದೆ. ಕೊಡಗಿನ ಜನರ ಆರೋಗ್ಯ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಡಳಿತದ ಸಿಬ್ಬಂದಿ ವರ್ಗದ ಸೇವೆ ನಿಜಕ್ಕೂ ಅನನ್ಯ.