ಶನಿವಾರಸಂತೆ, ಮೇ 7: ಹಾರಳ್ಳಿ ಗ್ರಾಮದ ಲಕ್ಷ್ಮಣ ಅವರ ಮೇಲೆ ಅವರ ಅಣ್ಣ ಹೇಮಚಂದ್ರ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಹೇಮಚಂದ್ರ ಅವರ ಹೆಂಡತಿ ದಮಯಂತಿ ಹಾಗೂ ಮಗ ಕೂಡ ಒಟ್ಟಿಗೆ ಸೇರಿ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ.

ಈ ಬಗ್ಗೆ ತಾ. 4 ರಂದು ದೊರೆತ ದೂರಿನ ಬಗ್ಗೆ ಪಿಎಸ್‍ಐ ಕೃಷ್ಣನಾಯಕ್ ವಿಚಾರಣೆ ಮಾಡಲಾಗಿ, ಠಾಣಾ ಸಿಬ್ಬಂದಿ ಶಫಿರ್ ಮೂವರ ಮೇಲೆ ಕಲಂ 323, 324, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.