ನಾಪೋಕ್ಲು, ಮೇ 7: ಚೆಯ್ಯಂಡಾಣೆ ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘ ಮತ್ತು ಗ್ರಾಮಸ್ಥರು ಸೇರಿ ಸಂಗ್ರಹಿಸಿದ ರೂ. 25000 ಮೊತ್ತದ ಚೆಕ್ಕನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಕೋವಿಡ್-19 ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್, ಕಾರ್ಯದರ್ಶಿ ಪೊಕ್ಕುಳಂಡ್ರ ಧನೋಜ್, ಉಪಾಧ್ಯಕ್ಷ ಮಂಞಪುರ ಚೇತನ್, ಸದಸ್ಯ ತೋಟಂಬೈಲ್ ಪವನ್ ಇದ್ದರು.