ನಾಪೆÇೀಕು, ಮೇ. 7: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆತಟ್ಟುವಿನಲ್ಲಿ ಅಡಿಯರ ಕಾಲೋನಿಯ ಮತ್ತಿತರ 50 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ಪೊಲೀಸ್ ಇಲಾಖೆ ವತಿಯಿಂದ ವಿತರಿಸಲಾಯಿತು. ಕೊರೊನಾ ಕಾಯಿಲೆಯಿಂದ ಮಕ್ಕಳು ಮತ್ತು ವಯೋವೃದ್ಧರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯ ವಸ್ತುಗಳ ಕಿಟ್ ಪೂರೈಸಲಾಗುತ್ತಿದೆ.
ಮಳೆಗಾಲ ಸೇರಿದಂತೆ ಮುಂದಿನ ದಿನಗಳಲ್ಲಿ ಯಾವುದೇ ಸಂಕಷ್ಟ ಎದುರಾದರೂ ಇಲಾಖಾಧಿಕಾರಿಗಳನ್ನು, ಪೆÇಲೀಸ್ ಠಾಣೆಯನ್ನು ಸಂಪರ್ಕಿಸಿ ಎಂದು ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ದಿವಾಕರ್ ಹೇಳಿದರು. ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್, ಪೆÇ್ರಬೆಷನರಿ ಎಸ್.ಐ ಜಗದೀಶ್, ಸಿಬ್ಬಂದಿಗಳಾದ ಬಶೀರ್, ಮಹೇಶ್, ರಾಜೇಶ್ ಮತ್ತಿತರರು ಇದ್ದರು.