ಕುಶಾಲನಗರ, ಮೇ 7: ಕುಶಾಲನಗರ ಸಮೀಪದ ಹಾರಂಗಿ ಪ್ರವಾಸಿ ಮಂದಿರದಲ್ಲಿ ರೌಡಿ ಶೀಟರ್‍ನೊಂದಿಗೆ ಪಾರ್ಟಿ ಮಾಡಿ ತೆಗೆಸಿಕೊಂಡಿದ್ದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಅಮಾನತುಗೊಂಡ ಪ್ರಕರಣ ನಡೆದಿದೆ.
ಹಾರಂಗಿ ಪ್ರವಾಸಿ ಮಂದಿರದಲ್ಲಿ ಮಾರ್ಚ್ 17 ರಂದು ಠಾಣಾಧಿಕಾರಿ ಲೋಕೇಶ್ ಅವರು ಪಿರಿಯಾಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ್‍ನೊಂದಿಗೆ ಸೇರಿ ರಾತ್ರಿಯಿಡೀ ಪಾರ್ಟಿ ಮಾಡಿದ್ದಾರೆ ಎಂದು ದಾಖಲೆಯೊಂದಿಗೆ ಡಿಎಸ್‍ಎಸ್ ಮುಖಂಡ ಅಣ್ಣಯ್ಯ ಎಂಬವರು ಮೈಸೂರು ಎಸ್ಪಿ ಮತ್ತು ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಠಾಣಾಧಿಕಾರಿ ಲೋಕೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.