ನಾಪೋಕ್ಲು, ಮೇ 7: ಬುಧವಾರ ಸಂಜೆ ಕೊಳಕೇರಿ ಗ್ರಾಮದಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬೃಹತ್ ಮರವೊಂದು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಹದಿನೈದು ಹೈಟೆನ್ಷನ್ ಕಂಬಗಳು ಹಾಗೂ ಐದು ಲೋಟೆನ್ಷನ್ ಕಂಬಗಳು ಹಾನಿಗೀಡಾಗಿವೆ. ಇದನ್ನು ಸರಿಪಡಿಸಲು ಮೂರು, ನಾಲ್ಕು ದಿನಗಳ ಅವಶ್ಯಕತೆ ಇದೆ. ಕೊಳಕೇರಿ ಗ್ರಾಮಕ್ಕೊಳಪಟ್ಟ ಕೋಟೇರಿ, ಕುಂಜಿಲ, ಕಕ್ಕಬ್ಬೆ, ನಾಲಡಿ, ಯವಕಪಾಡಿ ಮತ್ತಿತರ ಭಾಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಇಲಾಖೆಯ ಜೂನಿಯರ್ ಇಂಜಿನಿಯರ್ ಕೋರಿದ್ದಾರೆ.