ಮಡಿಕೇರಿ, ಮೇ 7: ಭಾರತ್ ಲಾಕ್‍ಡೌನ್ ನಡುವೆ ಕೇರಳದ ಕಣ್ಣೂರಿನಲ್ಲಿ ಇದುವರೆಗೆ ತಂಗಿದ್ದ ಕುಟ್ಟದ ವರ್ತಕರಿಬ್ಬರು ಮರಳಿ ತಮ್ಮ ಮಳಿಗೆಗೆ ಆಗಮಿಸಿದ್ದಾರೆ. ಈ ಬಗ್ಗೆ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ಸಂಬಂಧಿಸಿದ ಇಲಾಖೆಯವರು ಸೂಕ್ತ ನಿಗಾ ವಹಿಸುವಂತೆ ಕುಟ್ಟದ ತಿಮ್ಮು ಹಾಗೂ ಇತರರು ಒತ್ತಾಯಿಸಿದ್ದಾರೆ. ಈ ವ್ಯಕ್ತಿಗಳು ಕುಶಾಲನಗರ ಮೂಲಕ ಬಂದಿದ್ದು, ಆರೋಗ್ಯ ಮತ್ತು ಕಂದಾಯ ಇಲಾಖೆ ಕ್ವಾರಂಟೈನ್‍ಗೆ ಆದೇಶಿಸಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.