ಮಡಿಕೇರಿ, ಮೇ 7: ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಆರು ಕುಟುಂಬಗಳಿಗೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳು ಹಾಗೂ ತರಕಾರಿ ವಿತರಣೆ ಮಾಡಲಾಯಿತು.

ಮದೆ ಗ್ರಾ.ಪಂ. ವ್ಯಾಪ್ತಿಯ ಪಂದಕಳ ಎಂಬಲ್ಲಿ ಆರು ಕುಡಿಯ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿಗಳನ್ನು ಬೆಟ್ಟದ ತುದಿಯಲ್ಲಿರುವ ಅವರುಗಳ ವಾಸಸ್ಥಳಕ್ಕೆ ಕೊಂಡೊಯ್ದು ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ನಿರ್ದೇಶಕರುಗಳಾದ ಪೂಜಾರೀರ ಸುಮನ್, ದಂಬೆಕೋಡಿ ಗಯಾ, ನಡುಮನೆ ಪವನ್, ಮಾನಡ್ಕ ಬಿಜು, ಸಬ್ಬಂಡ್ರ ಜಗದೀಶ್, ಚೀಯಂಡಿ ತೇಜಸ್ ಪಾಪಯ್ಯ, ಪೂಜಾರೀರ ರಕ್ಷಿತ್ ಇದ್ದರು.