ಮಡಿಕೇರಿ, ಮೇ 5: ಊಟಿಯ ವಿಲ್ಲಿಂಗ್ಟನ್ನ ಭಾರತೀಯ ಭೂ ಸೇನೆಯ ಮದ್ರಾಸ್ ರೆಜಿಮೆಂಟ್ ಕೇಂದ್ರದ ಸೈನಿಕರು ಮತ್ತು ಅಥ್ಲೆಟಿಕ್ ಕೋಚ್ ಆಗಿರುವ ಕುಟ್ಟಂಡ ರಂಜನ್ ಕಾರ್ಯಪ್ಪ ಅವರಿಗೆ ಸುಬೇದಾರ್ ಆಗಿ ಬಡ್ತಿ ದೊರೆತಿದ್ದು, ಊಟಿಯಲ್ಲಿಯೇ ಸೇವೆ ಮುಂದುವರೆಸಿದ್ದಾರೆ. ಕುಟ್ಟಂಡ ರಂಜನ್ ಕಾರ್ಯಪ್ಪ ಅವರು ಜಿಲ್ಲೆಯ ಮಾದಾಪುರದ ಹಾಡಗೇರಿ ಗ್ರಾಮದ ದಿ. ಕಾರ್ಯಪ್ಪ ಮತ್ತು ಕಸ್ತೂರಿ ದಂಪತಿಯ ಪುತ್ರ.