ಮಡಿಕೇರಿ, ಮೇ 5: ಈಗಾಗಲೇ ಕಟಾವು ಮಾಡಲಾಗಿರುವ ಮರ ಸಾಗಾಣಿಕೆ ಸಂಬಂಧಿಸಿದಂತೆ ಪರವಾನಿಗೆಗೆ ಜಿಲ್ಲಾಡಳಿತಕ್ಕೆ ಹಲವು ಮನವಿಗಳು ಬರುತ್ತಿದ್ದು, ಈ ಸಂಬಂಧ ಆಯಾಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.

ಈಗಾಗಲೇ ಕಟಾವಾಗಿರುವ ಬೀಟೆ ಮರವನ್ನು ಸರ್ಕಾರಿ ನಾಟಾ ಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಲು ಪರವಾನಿಗೆ ನೀಡಲಾಗುತ್ತಿದೆ. ಜಿಲ್ಲೆಯೊಳಗೆ ಮತ್ತು ಸ್ವಂತ ಉಪಯೋಗಕ್ಕಾಗಿ ಮರಗಳನ್ನು ಸಾಮಿಲ್‍ಗೆ ತೆಗೆದುಕೊಂಡು ಹೋಗಲು ಅವಕಾಶವಿದ್ದು, ಈ ಸಂಬಂಧ ಲಾಕ್‍ಡೌನ್‍ಗೆ ಮೊದಲು ಪರವಾನಿಗೆ ಪಡೆದಿರುವವರು ಪರವಾನಿಗೆ ನವೀಕರಣ ಮಾಡಿಸಬೇಕಿದೆ.

ಜಿಲ್ಲೆಯೊಳಗೆ ಮರ ಸಾಗಾಣಿಕೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಭೇಟಿ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.