ಕೂಡಿಗೆ, ಮೇ 4: ಕುಶಾಲನಗರ ಹಾಸನ ಹೆದ್ದಾರಿಯ ಕೂಡ್ಲೂರು ಸಮೀಪದ ವೀರ ಭೂಮಿ ಸರ್ಕಲ್ ಸಮೀಪ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ತಲೆ ಮತ್ತು ಕಾಲಿಗೆ ಗಾಯಗಳಾಗಿವೆ.

ನಂದಕುಮಾರ್ ಎಂಬವರು ಚಾಲಿಸುತ್ತಿದ್ದ ಕಾರು (ಕೆಎ 12 ಎಂಎ 6072) ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಹೋಗುವ ಸಂದರ್ಭ ಅಜಿತ್ ಎಂಬವರು ಚಾಲಿಸುತ್ತಿದ್ದ ಬೈಕ್ (ಕೆಎ 45 ಎಲ್ 1876) ಕುಶಾಲನಗರದಿಂದ ಕೂಡಿಗೆ ಕಡೆಗೆ ಬರುತಿತ್ತು. ಅಜಿತ್‍ಗೆ ಕುಶಾಲನಗರ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ಸಾಗಿಸ ಲಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.