ಸುಂಟಿಕೊಪ್ಪ, ಮೇ 4: ಸುಂಟಿಕೊಪ್ಪ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಲಸೆ ಕಾರ್ಮಿಕರನ್ನು ಗ್ರಾಮ ಪಂಚಾಯಿತಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ವತಿಯಿಂದ 2 ಬಸ್‍ಗಳಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು.

ಇಲ್ಲಿನ ಬಾಳೆ ತೋಟದಲ್ಲಿ ಚಾಮರಾಜನಗರದ ತೋಟ ಕಾರ್ಮಿಕರು ನೆಲೆಸಿದ್ದರು, ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋದೂರು ಕಾಫಿ ತೋಟದಲ್ಲಿ ಬೆಳಗಾಂ, ಹಾವೇರಿ, ರಾಯಚೂರು, ಬಳ್ಳಾರಿ ಜಿಲ್ಲೆಯಿಂದ ಆಗಮಿಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸರಕಾರದ ನಿರ್ದೇಶನದಂತೆ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಪಿಡಿಓ ವೇಣುಗೋಪಾಲ್, ಗ್ರಾ.ಪಂ. ಸದಸ್ಯರುಗಳಾದ ನಾಗರತ್ನ ಸುರೇಶ್, ರತ್ನಾ, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿಗಳು, ಜಿ.ಪಂ. ಸದಸ್ಯ ಪಿ.ಎಂ. ಲತೀಫ್ 2 ಬಸ್‍ನಲ್ಲಿ ಕಾರ್ಮಿಕರನ್ನು ಸ್ವಸ್ಥಳಕ್ಕೆ ಕಳುಹಿಸಿಕೊಟ್ಟರು.