ನಾಪೋಕ್ಲು, ಮೇ 4: ಮಾಸ್ಕ್ ಧರಿಸದೇ ಪಟ್ಟಣದಲ್ಲಿ ಓಡಾಡುವ ಜನರಿಗೆ ದಂಡ ವಿಧಿಸಲು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಎಲ್ಲಾ ಸಿಬ್ಬಂದಿಗಳ ಕೈಯಲ್ಲಿಯೂ ದಂಡದ ರಶೀದಿ ಪುಸ್ತಕ ನೀಡಿ ಪಟ್ಟಣಕ್ಕೆ ಕಳುಹಿಸಲಾಗಿತ್ತು. ಹಲವರಿಗೆ ದಂಡ ವಿಧಿಸಲಾಯಿತು. ಈ ಬಗ್ಗೆ ಅರಿವಿಲ್ಲದ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿ ಎಚ್ಚರಿಸಿ ಕಳುಹಿಸಿದ್ದು ಕಂಡು ಬಂತು.
ಉಳಿದಂತೆ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಸಲೂನ್ಗಳನ್ನು ತೆರೆಯಲಾಗಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಕಂಡು ಬಂತು. ಕೆಲವು ಆಟೋಗಳಲ್ಲಿ ಒಬ್ಬ ಪ್ರಯಾಣಿಕನನ್ನು ಕರೆದೊಯ್ಯುತ್ತಿದ್ದರೆ, ಇನ್ನೂ ಕೆಲವು ಆಟೋಗಳು ಕಿಕ್ಕಿರಿದು ಸಂಚರಿಸುತ್ತಿದ್ದದ್ದು ಗೋಚರ ವಾಯಿತು.
ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್.ಕಿರಣ್ ಮತ್ತು ಸಿಬ್ಬಂದಿ ಪಟ್ಟಣದಲ್ಲಿ ಗುಂಪಾಗಿ ನಿಂತಿದ್ದ ಜನರ ಮಧ್ಯೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸು ತ್ತಿದ್ದುದು ಕಂಡು ಬಂತು.