ಮಡಿಕೇರಿ, ಮೇ 4: ನಿನ್ನೆ ದಿನ ನಿಧನರಾದ ಹಿರಿಯ ಸಾಹಿತಿ, ಕವಿ ನಾಡೋಜ ಕೆ.ಎಸ್. ನಿಸಾರ್ ಅಹ್ಮದ್ ಅವರ ಆತ್ಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆದ ಸರಳ ಶ್ರದ್ಧಾಂಜಲಿ ಸಭೆಯಲ್ಲಿ ನಿಸಾರ್ ಅಹ್ಮದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಂತಿ ಕೋರಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ನಿರ್ದೇಶಕರುಗಳಾದ ಪಿಲಿಪ್ ವಾಸ್, ಕೆ.ಕೆ.ನಾಗರಾಜಶೆಟ್ಟಿ, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ.ಸುಕುಮಾರ್, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿ ಶಿವಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಕಸಾಪ ಕಚೇರಿ ಸಿಬ್ಬಂದಿ ಶ್ವೇತಾ ಇದ್ದರು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವದರೊಂದಿಗೆ ಮುಖಗವಸು ಧರಿಸಿದ್ದರು.
ಕುಶಾಲನಗರದಲ್ಲಿ ನುಡಿನಮನ
ಕಣಿವೆ: ನಾಡನ್ನು ಅಗಲಿದ ಸಾಹಿತ್ಯ ಕ್ಷೇತ್ರದ ಸಾರ್ವಭೌಮರಂತಿದ್ದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಪಟ್ಟಣದ ಮಾರುಕಟ್ಟೆ ರಸ್ತೆಯ ಕೃಷಿಕರ ಸಹಕಾರ ಭವನದಲ್ಲಿ ನಡೆಯಿತು.
ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿಸಾರ್ ಅಹಮದ್ ಅವರ ಭಾವಚಿತ್ರಕ್ಕೆ ಪುಷÀ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಸಾಹಿತ್ಯಾಸಕ್ತರ ವೇದಿಕೆ ಸಂಚಾಲಕ ಕೆ.ಎಸ್. ಮೂರ್ತಿ, ನಿವೃತ್ತ ಶಿಕ್ಷಕ ಎಂ.ಎಚ್. ನಜೀರ್ ಅಹಮದ್, ಉದ್ಯಮಿ ಎಂ.ಕೆ. ದಿನೇಶ್, ಜಿಲ್ಲಾ ಪರಿಷÀತ್ ಮಾಜಿ ಸದಸ್ಯ ಎಸ್.ಎನ್. ನರಸಿಂಹ ಮೂರ್ತಿ, ಕುಶಾಲನಗರ ಕಸಾಪ ಮಾಜಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್, ವ್ಯವಸಾಯ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ವಿ.ಎಸ್. ಆನಂದಕುಮಾರ್, ಕಾರ್ಯದರ್ಶಿ ಬಿ.ಬಿ. ಲೋಕೇಶ್, ವಿಜಯಕುಮಾರ, ರಾಜು, ಸಜಿ ಮೊದಲಾದವರಿದ್ದರು.