ಸಿದ್ದಾಪುರ, ಮೇ 4: ಸಿದ್ದಾಪುರ ವ್ಯಾಪ್ತಿಯಲ್ಲಿ ಇದ್ದ ಹೊರ ಜಿಲ್ಲೆಯ ಕಾರ್ಮಿಕರನ್ನು ಬಸ್ಸಿನ ಮೂಲಕ ಅವರುಗಳ ಊರಿಗೆ ಅಭಿವೃದ್ಧಿ ಅಧಿಕಾರಿ ಕಳುಹಿಸಿಕೊಟ್ಟರು. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೊರರಾಜ್ಯ ಹಾಗೂ ಹೊರಜಿಲ್ಲೆಯ ಕಾರ್ಮಿಕರು ಹೋಗದಂತೆ ನಿರ್ಬಂಧ ವಿಧಿಸಲಾಗಿತ್ತು ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಹೊರಜಿಲ್ಲೆಯ ಕಾರ್ಮಿಕರನ್ನು ಪಂಚಾಯಿತಿ ಮೂಲಕ ಕಳುಹಿಸುವ ನಿಟ್ಟಿನಲ್ಲಿ ಸಿದ್ದಾಪುರದಿಂದ ಸೋಮವಾರದಂದು ಬಸ್ಸುಗಳ ಮೂಲಕ ನೂರಾರು ಮಂದಿಯನ್ನು ಮೈಸೂರು, ಚಾಮರಾಜನಗರ ಜಿಲ್ಲೆಗೆ ಕಳುಹಿಸಿಕೊಡಲಾಯಿತು.

ಸಿದ್ದಾಪುರ ಬಸ್ ನಿಲ್ದಾಣದಲ್ಲಿ 4 ಸರಕಾರಿ ಬಸ್‍ಗಳ ಮುಖಾಂತರ ಒಂದು ಬಸ್ಸ್‍ನಲ್ಲಿ 25 ಮಂದಿ ಪ್ರಯಾಣಿಕರಂತೆ ನೂರು ಮಂದಿ ಕಾರ್ಮಿಕರನ್ನು ಕಳುಹಿಸಲಾಯಿತು. ಕಾರ್ಮಿಕರು ತೆರಳುವ ಮುನ್ನ ಅವರ ದಾಖಲಾತಿಗಳನ್ನು ಪಂಚಾಯಿತಿ ಮೂಲಕ ಪರಿಶೀಲಿಸಲಾಯಿತು. ಅಲ್ಲದೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸದಸ್ಯರುಗಳು ಹಾಜರಿದ್ದರು.

ವರದಿ: ವಾಸು