ಮಡಿಕೇರಿ, ಮೇ 5: ಕೊರೊನಾ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವವನ್ನು ಸಂಗ್ರಹಿಸಲು ಈ ಹಿಂದೆ ಕೊರೊನಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಕಿಯೋಸ್ಕ್ನ್ನು ನಿರ್ಮಿಸಲಾಗಿದೆ.
ಪ್ರಸ್ತುತ ಅದೇ ರೀತಿಯ 4 ಕಿಯೋಸ್ಕ್ಗಳನ್ನು ದಾನಿಗಳ ಸಹಕಾರ ದಿಂದ ನಿರ್ಮಿಸಲಾಗಿದೆ. ಇವುಗಳ ಪೈಕಿ ಕೂಡಿಗೆ ಓಲಮ್ ಆಗ್ರೋ ಇಂಡಿಯಾ ಲಿಮಿಟೆಡ್ 1, ಗೋಣಿಕೊಪ್ಪದ ಅನುರಾಧ್ ಸಂಸ್ಥೆ 2 ಮತ್ತು ಭಾರತೀಯ ವೈದ್ಯಕೀಯ ಸಂಘವು 1 ಕಿಯೋಸ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಿದೆ. ಕೊರೊನಾ ನಿಗ್ರಹ ಸಂಬಂಧದ ಕಾರ್ಯದಲ್ಲಿ ಜಿಲ್ಲಾಡಳಿತ ದೊಂದಿಗೆ ಸಹಕರಿಸಿದ ಸಂಸ್ಥೆಗೆ ಜಿಲ್ಲಾಡಳಿತವು ಧನ್ಯವಾದ ಗಳನ್ನು ಸಮರ್ಪಿಸಿದೆ. ಈ ಕಿಯೋಸ್ಕ್ ಗಳನ್ನು ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪ ಮತ್ತು ವೀರಾಜಪೇಟೆ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.