ಮಡಿಕೇರಿ, ಮೇ 3: ಇಲ್ಲಿನ ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಇಪ್ಪತ್ತು ಮಂದಿ ವೈದ್ಯರ ತಂಡದೊಂದಿಗೆ ಶೂಶ್ರೂಷಕಿಯರು, ಆಯಾಗಳ ಸಹಿತ ಒಟ್ಟು 40 ಮಂದಿ ಆರೋಗ್ಯ ಕಾರ್ಯಕರ್ತೆಯರು ಸೇರಿ ಸುಮಾರು 60 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮಾರ್ಚ್ 12 ರಂದು ಸೋಮವಾರಪೇಟೆಗೆ ದುಬೈನಿಂದ ಬಂದಿದ್ದ ಮೊದಲ ವ್ಯಕ್ತಿಯಿಂದ; ಕೊಂಡಂಗೇರಿಯಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದಾತ ಸಹಿತ ಇದುವರೆಗೆ 250ಕ್ಕೂ ಅಧಿಕ ಮಂದಿಗೆ ಜಿಲ್ಲಾಸ್ಪತೆ ್ರಯಲ್ಲಿ ತಪಾಸಣೆಯೊಂದಿಗೆ ಈ ತಂಡ ಚಿಕಿತ್ಸೆ ನೀಡಿದೆ.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎ. ಕಾರ್ಯಪ್ಪ, ವೈದ್ಯಕೀಯ ವಿಭಾಗದ ಕಾಲೇಜು ಮುಖ್ಯಸ್ಥೆ ಡಾ. ಮೇರಿ ನಾಣಯ್ಯ, ಜಿಲ್ಲಾಸ್ಪತ್ರೆಯ ಅಧೀಕ್ಷಕ ಬಸವರಾಜ್ ಹಾಗೂ ಕೋವಿಡ್-19 ಉಸ್ತುವಾರಿ ಡಾ. ಎ.ಜೆ.ಲೋಕೇಶ್ ಮಾರ್ಗದರ್ಶನ ದಲ್ಲಿ ಈ ಆರೋಗ್ಯ ತಂಡ ನಿರಂತರ ಸೇವೆಯಲ್ಲಿ ತೊಡಗಿದೆ. ಈ ವೈದ್ಯರುಗಳು ಹಾಗೂ ಆರೋಗ್ಯ ಕಾರ್ಯಕರ್ತರ ತಂಡವು ಪ್ರಾರಂಭಿಕವಾಗಿ ವಿದೇಶಗಳಿಂದ ಜಿಲ್ಲಾಸ್ಪತ್ರೆಗೆ ಕರೆತಂದವರ ತಪಾಸಣೆ ನಡೆಸಿದ್ದು, ಅನಂತರದಲ್ಲಿ ಶೀತ, ನೆಗಡಿ, ಗಂಟಲು ಉರಿ,
(ಮೊದಲ ಪುಟದಿಂದ) ತಲೆ ನೋವು ಇತ್ಯಾದಿ ಕಾರಣದೊಂದಿಗೆ ಕೊರೊನಾ ಸೋಂಕಿನ ಆತಂಕದಿಂದ ಬಂದವರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.
ಚಿಕಿತ್ಸಾ ತಂಡದ ಮುಖ್ಯಸ್ಥ ಡಾ. ಎ.ಜೆ. ಲೋಕೇಶ್ ಪ್ರಕಾರ, ಆಸ್ಪತ್ರೆಯಲ್ಲಿ ಒಂದು ವಿಭಾಗ ಇದೀಗ ಸಂಪೂರ್ಣ ಕೊರೊನಾ ನಿಯಂತ್ರಣ ಆಸ್ಪತ್ರೆಯಾಗಿ ಬೇರ್ಪಟ್ಟಿದ್ದು, ಸಾಮಾನ್ಯ ಚಿಕಿತ್ಸೆಗೆ ಅಶ್ವಿನಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸ ಲಾಗಿದೆ. ಕೊರೊನಾ ಶಂಕೆಯಿಂದ ಬರುವವರ ತಪಾಸಣೆ ಹಾಗೂ 250 ಹಾಸಿಗೆಯ ಕ್ವಾರಂಟೈನ್ ಸೇವೆಗೆ ಸರಕಾರಿ ಆಸ್ಪತ್ರೆ ಸಜ್ಜಾಗಿದೆ. ಇಲ್ಲಿ ಸುಳ್ಯದ ಕೆವಿಜಿ ವೈದ್ಯಕೀಯ ಆಸ್ಪತ್ರೆ ಹಾಗೂ ಮಡಿಕೇರಿ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಶಿಕ್ಷಣ ವಿದ್ಯಾರ್ಥಿ ಗಳನ್ನು ಕೂಡ ಸೇವೆಗೆ ತೊಡಗಿಸಿ ಕೊಳ್ಳಲಾಗಿದೆ. ಒಟ್ಟಿನಲ್ಲಿ ಒಂದು ತಂಡದ ರೀತಿಯಲ್ಲಿ ಎಲ್ಲರೂ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಶ್ರಮಿಸುತ್ತಿ ರುವುದಾಗಿ ಡಾ. ಲೋಕೇಶ್ ‘ಶಕ್ತಿ’ ಯೊಂದಿಗೆ ಅನಿಸಿಕೆ ಹಂಚಿ ಕೊಂಡಿದ್ದಾರೆ.
24 ಗಂಟೆ ಸೇವೆ: ಇಲ್ಲಿನ ಜಿಲ್ಲಾ ವೈದ್ಯಕೀಯ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಿರುದ್ಧ ವೈದ್ಯರು ಮತ್ತು ಸಿಬ್ಬಂದಿಯ ತಂಡ ನಿರಂತರವಾಗಿ ಸರದಿಯೊಂದಿಗೆ ಸದಾ 24 ಗಂಟೆಯೂ ಸೇವೆಗೆ ಲಭ್ಯವಿದ್ದಾರೆ. ಸಾರ್ವಜನಿಕರು ಕೊರೊನಾ ಸೋಂಕಿನ ಬಗ್ಗೆ ಯಾವುದೇ ಆತಂಕ ಗೊಳ್ಳದೆ ನೇರವಾಗಿ ವೈದ್ಯರನ್ನು ಸಂದರ್ಶಿಸಿ ಆರೋಗ್ಯ ತಪಾಸಣೆ ಮೂಲಕ ಸೂಕ್ತ ಚಿಕಿತ್ಸೆ ಹೊಂದಿ ಕೊಳ್ಳುವಂತೆ ಸಲಹೆ ನೀಡಿದ್ದಾರೆ.