ಸುಂಟಿಕೊಪ್ಪ, ಮೇ 3: ಸುಂಟಿಕೊಪ್ಪದ ವಾರದ ಸಂತೆಯನ್ನು ಸೋಮವಾರಕ್ಕೆ ಮುಂದೂಡಿರುವ ಕ್ರಮ ಸರಿಯಲ್ಲ. ಇದರಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಆರೋಪಿಸಿದಾರೆ.
ಸುಂಟಿಕೊಪ್ಪದಲ್ಲಿ ಹಿಂದಿನಿಂದಲೂ ಭಾನುವಾರವೇ ವಾರದ ಸಂತೆಯು ನಡೆದು ಬರುತ್ತಿದೆ.
ಶನಿವಾರ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ವೇತನ ನೀಡಲಾಗುತ್ತಿದೆ. ಭಾನುವಾರ ಸಂತೆ ಸಾಮಗ್ರಿ ಖರೀದಿಸಲು ಸುಂಟಿಕೊಪ್ಪ ಪಟ್ಟಣಕ್ಕೆ ಕಾರ್ಮಿಕರು ಆಗಮಿಸುತ್ತಾರೆ.
ಸೋಮವಾರ ಕಾರ್ಮಿಕರಿಗೆ ಎಂದಿನಂತೆ ಕೂಲಿ ಕೆಲಸ ಇರುತ್ತದೆ. ಆದ್ದರಿಂದ ಸೋಮವಾರ ಸಂತೆಗೆ ಬರಲು ಸಾಧ್ಯವಾಗುವುದಿಲ್ಲವಾದ್ದರಿಂದ ಗ್ರಾ.ಪಂ. ಆಡಳಿತ ನಿಲುವನ್ನು ಬದಲಿಸಿ ಭಾನುವಾರ ಸಂತೆ ವ್ಯಾಪಾರಕ್ಕೆ ಅವಕಾಶ ಒದಗಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.