ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ 160 ಕುಟುಂಬಗಳಿಗೆÉ ಆಹಾರ ಪಡಿತರ ಕಿಟ್ ವಿತರಣೆ ಮಾಡಲಾಯಿತು. ಮಾದಲಾಪುರ ಸಮೀಪದ. ಬ್ಯಾಡಗೊಟ್ಟ ಗ್ರಾಮದಲ್ಲಿ ಈ ಕುಟುಂಬದವರಿಗೆ ಜಿಲ್ಲಾಡಳಿತ ವತಿಯಿಂದ ನೀಡುವ ಎರಡನೇ ಹಂತದ ಪಡಿತರ ಆಹಾರ ಕಿಟ್‍ಗಳನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ವಿತರಿಸಿ ಮಾತನಾಡಿ, ಪುನರ್ವಸತಿ ಕೇಂದ್ರದ ಎಲ್ಲಾ ಕುಟುಂಬದವರು ಮೊದಲು ಶುಚಿತ್ವದ ಕಡೆಗೆ ಗಮನ ಹರಿಸಬೇಕು. ಆರೋಗ್ಯ ಇಲಾಖೆಯವರು ನೀಡುವ. ಸಮಗ್ರ ಮಾಹಿತಿ ಪಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಈ ಸಂದರ್ಭ ಪಂಚಾಯಿತಿ ಅಧಿಕಾರಿ ಶಿಲ್ಪಾ, ಸಿಬ್ಬಂದಿಗಳಾದ ಅನಿಲ್ ಕುಮಾರ್, ಬಾಪು, ಆನಂದ, ನಾಗೇಶ ಹಾಗೂ ಪುನರ್ವಸತಿ ಕೇಂದ್ರದ ಪ್ರಮುಖರು ಹಾಜರಿದ್ದರು.ಮಡಿಕೇರಿ: ಮೋಬಿಯಸ್ ಫೌಂಡೇಶನ್ ವತಿಯಿಂದ ಕೊಡಗು ಪೆÇಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಜಿಲ್ಲೆಯ ಎಲ್ಲಾ 150 ಗೃಹ ರಕ್ಷಕ ಸಿಬ್ಬಂದಿಗಳಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಪಡಿತರ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಮೋಬಿಯಸ್ ಫೌಂಡೇಶನ್ ಕೊಡಗು ಜಿಲ್ಲಾ ಸಂಚಾಲಕ ಮಧು ಬೋಪಣ್ಣ, ಡಿವೈಎಸ್ಪಿ ಹಾಗೂ ಗೃಹ ರಕ್ಷಕ ದಳದ ಕಮಾಂಡೆಂಟ್ ದಿನೇಶ್ ಕುಮಾರ್, ಸಿಐ ಮೇದಪ್ಪ ಮತ್ತಿತರರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆಯಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ವಕೀಲ ಕೃಷ್ಣಮೂರ್ತಿ ಹೇಳಿದರು.

ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಕೆ. ದಿವಾಕರ ಮಾತನಾಡಿ, ಕೊರೊನಾ ಲಾಕ್‍ಡೌನ್‍ನಿಂದ ತೊಂದರೆಯಲ್ಲಿರುವ ಅತೀ ಬಡವರನ್ನು ಗುರುತಿಸಿ ಆಹಾರ ಕಿಟ್ ಒದಗಿಸಲಾಗಿದೆ ಎಂದರು.

ಈ ಸಂದರ್ಭ ಮಡಿಕೇರಿ ತಾಲೂಕು ಸಂಚಾಲಕ ದೀಪಕ್, ವಿಜಯಕುಮಾರ್, ಸೋಮಪ್ಪ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಗೌರವಾಧ್ಯಕ್ಷ ಕಾವೇರಪ್ಪ, ಸದಸ್ಯರುಗಳಾದ ನರಸಿಂಹ, ಚಂದ್ರ, ಮಹಾದೇವ, ಜನಾರ್ಧನ, ವೆಂಕಟೇಶ್ ಹಾಗೂ ರಾಮಚಂದ್ರ, ಪಿ.ಡಿ.ಓ. ವೇಣುಗೋಪಾಲ್ ಮತ್ತಿತರರು ಇದ್ದರು.ಸೋಮವಾರಪೇಟೆ: ತಾಲೂಕು ಆಡಳಿತದ ವತಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ 37 ಮಂದಿ ಪೌರ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪೌರ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿ, ಪಟ್ಟಣದ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರು ತಮ್ಮ ವೈಯುಕ್ತಿಕ ಸ್ವಚ್ಛತೆಯತ್ತಲೂ ಗಮನಹರಿಸಬೇಕು ಎಂದರು.

ಕೋವಿಡ್ ಆತಂಕದ ನಡುವೆಯೂ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿರುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರದ ಹೆಚ್ಚಿನ ಸಹಕಾರ ಸಿಗಲಿದೆ ಎಂದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮಡಿಕೇರಿ: ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತರಕಾರಿ ಕಿಟ್ ಮಡಿಕೇರಿ ರಕ್ಷಣಾ ವೇದಿಕೆ ಮೂಲಕ ವಿತರಿಸಲಾಯಿತು. ಐಎನ್‍ಟಿಯುಸಿ ವತಿಯಿಂದ ಜಿಲ್ಲೆಯ ರೈತರಿಂದ ನೇರವಾಗಿ ಖರೀದಿಸಿದ ಒಟ್ಟು 12 ಟನ್‍ನಷ್ಟು ತರಕಾರಿಗಳನ್ನು ದುಡಿಯುವ ಕೈಗಳಿಗೆ ವಿತರಣೆ ಮಾಡುತ್ತಿರುವುದಾಗಿ ಸಂಸ್ಥೆ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಕಿಟ್ ವಿತರಣೆ ಮಾಡಿ ಹೇಳಿದರು.

ಮಡಿಕೇರಿ ರಕ್ಷಣಾ ವೇದಿಕೆ ಅಧ್ಯಕ್ಷ, ವಕೀಲ ಪವನ್ ಪೆಮ್ಮಯ್ಯ, ಐಎನ್‍ಟಿಯುಸಿಯ ಕಿಶೋರ್ ಕುಮಾರ್, ಉಸ್ಮಾನ್, ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು.