ಮಡಿಕೇರಿ: ಮಡಿಕೇರಿ ತಾಲೂಕಿನ ಮೂರ್ನಾಡು-ಮುತ್ತಾರುಮುಡಿ ಸಮೀಪದ ಬ್ರಿಡ್ಜ್‍ನಲ್ಲಿ ಕೆಲಸ ಮಾಡುವ ಮತ್ತು ಶೆಡ್‍ನಲ್ಲಿರುವ ಗಾರೆ ಕೆಲಸಗಾರರಿಗೆ, ದ್ವಾರಕಾ ಎಸ್ಟೇಟ್ ಮತ್ತು ಕೆ.ಎಮ್. ಮೀನಾ ಎಸ್ಟೇಟ್‍ನ ತೋಟದ ಕಾರ್ಮಿಕರಿಗೆ, ಮೂರ್ನಾಡು ಆಟೋ ಸಂಘದವರಿಗೆ, ದೋಭಿಗಳಿಗೆ, ಟೈಲರಿಂಗ್ ಕಾರ್ಮಿಕರಿಗೆ ಹಾಗೂ ಪಾಲೆಮಾಡುವಿನ ಕಟ್ಟಡ ಮತ್ತು ಇತರೆ ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ವಾಷ್ ಸೋಪ್ ಮತ್ತು ಸ್ಯಾನಿಟೈಸರ್‍ಗಳನ್ನು ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಸಂಘಟನೆಗಳ ಮುಖಾಂತರ ವಿತರಿಸಲಾಯಿತು. ಕಾರ್ಮಿಕ ಅಧಿಕಾರಿ ಎಂ.ಎಂ. ಯತ್ನಟ್ಟಿ, ರೆಡ್‍ಕ್ರಾಸ್ ಕಾರ್ಯದರ್ಶಿ ಮುರಳೀಧರ್ ಇದ್ದರು.ಕುಶಾಲನಗರ: ಕುಶಾಲನಗರ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಾಸ್ಕ್ ಮತ್ತು ಮುಖ ರಕ್ಷಣೆ ಮಾಡುವ ಶೀಲ್ಡ್‍ಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವಿತರಿಸಿದೆ. ಗಡಿಯ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕೊರೊನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿತರಿಸಿದ್ದಾರೆ.ಸಂಪಾಜೆ: ಕೊರೊನಾ ವೈರಸ್ ಹಿನ್ನೆಲೆ ಗ್ರಾಮ ವ್ಯಾಪ್ತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಕಾರ್ಯಕರ್ತರಿಗೆ ಸಂಪಾಜೆ ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅರಣ್ಯ ಇಲಾಖೆ, ಆರಕ್ಷಕ ಠಾಣಾ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಅಭಿವೃದ್ಧಿ ಅಧಿಕಾರಿ ಶೋಭರಾಣಿ, ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಪಂಚಾಯಿತಿ ಸದಸ್ಯೆ ರಮಾದೇವಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು.ಮಡಿಕೇರಿ: ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಮನೆಗೆಲಸ ಮಾಡುವ ಮಹಿಳಾ ಕಾರ್ಮಿಕರಿಗಾಗಿ ಮಾಸ್ಕ್ ಮತ್ತು ಸೋಪನ್ನು ವಿತರಿಸಲಾಯಿತು. ಕೋವಿಡ್-19 ಹಿನೆÀ್ನಲೆಯಲ್ಲಿ ಮನೆಗೆಲಸ ಮಾಡುವ ಮಹಿಳೆಯರು ವಹಿಸಿಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ತಿಳಿಸಿದರು.