ಮಡಿಕೇರಿ, ಏ. 29: ಕೊಡವ ಸಮಾಜದ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಪೆÇಮ್ಮಕ್ಕಡ ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಕೊಡವ ಜನಾಂಗೀಯ ನಿಂದನೆ ಮಾಡುವವರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಬೆಂಗಳೂರು ಕೊಡವ ಸಮಾಜದ ಕಾರ್ಯದರ್ಶಿ ಚೆರಿಯಪಂಡ ಸುರೇಶ್ ಅವರು ಕೊಡವ ಸಮಾಜದ ಅಧ್ಯಕ್ಷ ಮತ್ತು ಪೆÇಮ್ಮಕ್ಕಡ ಕೂಟದ ಅಧ್ಯಕ್ಷರು ಸದಸ್ಯರನ್ನು ಉಸ್ತುವಾರಿ ಸಚಿವರ ಭೇಟಿ ಮಾಡಿಸಿ ಈ ಬಗ್ಗೆ ವಿವರಿಸಿದರು.

ಸಚಿವರು ಅಲ್ಲೇ ಇದ್ದ ಜಿಲ್ಲಾಧಿಕಾರಿ ಮತ್ತು ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಒಂದು ಸಮುದಾಯವನ್ನು ಅವಮಾನಿಸುವ ಜನ ಯಾರೇ ಆದರೂ ಸರಿ ಅವರನ್ನು ಕೂಡಲೇ ಬಂಧಿಸಿ ಮುಂದಿನ ಕ್ರಮಕೈಗೊಳ್ಳುವಂತೆ ತಿಳಿಸಿದರು. ಅದು ಅಲ್ಲದೆ ಜಿಲ್ಲಾ ಪೆÇಲೀಸ್ ಅಧಿಕಾರಿಗಳಿಗೆ ಲಿಖಿತ ದೂರೊಂದನ್ನು ದಾಖಲಿಸುವಂತೆ ಹೇಳಿದರು. ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ದೇವಯ್ಯ, ಸಹಕಾರ್ಯದರ್ಶಿ ಮಾದೇಟ್ಟಿರ ಬೆಳ್ಯಪ್ಪ, ಉಪಾಧ್ಯಕ್ಷ ಚೋವಂಡ ರಘು ಕಾಳಪ್ಪ, ಕಾರ್ಯದರ್ಶಿ ಅರೇಯಡ ರಮೇಶ್, ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೆಳ್ಯಪ್ಪ ಹಾಗೂ ಇತರರು ಹಾಜರಿದ್ದರು.