ನಾಪೆÇೀಕ್ಲು, ಏ. 29: ಬಾಳೆ ಕೃಷಿ ಮಾಡ ಹೊರಟು ರೈತರು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ.ಕೇರಳದ ಕೃಷಿಕರೊಬ್ಬರು ಇಲ್ಲಿನ ಬೇತು ಗ್ರಾಮದಲ್ಲಿ ಬಾಳೆ ಕೃಷಿ ಮಾಡಲು ಹೊರಟು ಹಲವಾರು ಸಮಸ್ಯೆಗಳನ್ನು ಎದುರಿಸಿ ಇನ್ನೇನು ಇಳುವರಿ ಪಡೆಯಬೇಕು ಎನ್ನುವಷ್ಟರಲ್ಲಿ ಕೊರೊನಾ ಹಾವಳಿ ಎದುರಾಗಿದೆ. ಬಾಳೆ ಬೆಳೆದ ರೈತ ಹಾಗೂ ಕಾರ್ಮಿಕರು ಕೇರಳಕ್ಕೆ ತೆರಳಿದವರು ಮತ್ತೆ ಕೊಡಗಿಗೆ ಬರಲಾಗದೆ ಬಾಳೆಯ ಆರೈಕೆ ಮಾಡಲು ಪರಿತಪಿಸುವಂತಾಗಿದೆ.

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಗಾಳಿ, ಮಳೆಯಾಗುತ್ತಿದ್ದು ಎತ್ತರಕ್ಕೆ ಬೆಳೆದು ನಿಂತ ಬಾಳೆಯ ಗಿಡಗಳಿಗೆ ಆಧಾರ ನೀಡಬೇಕಾಗಿದೆ. ಗಾಳಿಯಿಂದಾಗಿ ಬಾಳೆಯ ಗಿಡಗಳು ನೆಲಕಚ್ಚುತ್ತಿವೆ. ಬಾಳೆಯ ಮೂತಿ ಕತ್ತರಿಸಲು ಇದೀಗ ಸೂಕ್ತ ಸಮಯವಾಗಿದ್ದು ಕೇರಳದಲ್ಲಿ ಅವುಗಳಿಗೆ ಉತ್ತಮ ಬೇಡಿಕೆಯೂ ಇದೆ. ಆದರೆ ಲಾಕ್ ಡೌನ್ ನಿಂದ ಸಂಚಾರ ನಿಬರ್ಂಧದಿಂದಾಗಿ ಕೃಷಿ ಕೆಲಸ ಸ್ಥಗಿತಗೊಂಡಿದೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಬಾಳೆ ಕೃಷಿ ಮಾಡುತ್ತಿರುವ ನೌಶಾದ್.

ಬಾಳೆಗೆ ಉತ್ತಮ ಬೇಡಿಕೆ ಇರುವುದನ್ನು ಮನಗಂಡು ಒಂದು ವರ್ಷದ ಹಿಂದೆ ಇಲ್ಲಿನ ಬೇತು ಗ್ರಾಮದಲ್ಲಿ ಪಾಳು ಬಿದ್ದ ಗದ್ದೆಯನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡಲು ಹೊರಟ ನೌಶಾದ್‍ಗೆ ಎದುರಾದ ಅಡೆತಡೆಗಳು ಹಲವು. ಪಾಳು ಗದ್ದೆಯನ್ನು ಹದ ಮಾಡಲು ಸಾಕಷ್ಟು ಹೆಣಗಬೇಕಾಯಿತು. ಆಗಸ್ಟ್ ತಿಂಗಳಲ್ಲಿ ಸುರಿದ ಬಿರುಸಿನ ಮಳೆಗೆ ಬಾಳೆಯ ಗಿಡಗಳು ನೆಲಕಚ್ಚುವ ಸ್ಥಿತಿ ಎದುರಾಗಿತ್ತು, ಬಳಿಕ ಚೇತರಿಸಿಕೊಂಡ ಗಿಡಗಳಿಗೆ ಆರೈಕೆ ಮಾಡಿ ಗೊನೆ ಬಿಡುವಷ್ಟರಲ್ಲಿ ಕಾಡುಹಂದಿಗಳ ಉಪಟಳ ಕಾಡಿತ್ತು. ಅಡೆತಡೆಗಳನ್ನು ನಿವಾರಿಸುವ ವೇಳೆಗೆ ಈಗ ಕೃಷಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಕಾಟದಿಂದ ಮಾರುಕಟ್ಟೆ ಸಿಗುವುದೂ ಕಷ್ಟಕರವಾಗಿದೆ. ವರ್ಷದ ಶ್ರಮಕ್ಕೆ ಪ್ರತಿಫಲ ವಿರಲಿ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎಂದು ಬೇಸರ ವ್ಯಕ್ತಪಡಿಸುತ್ತಾರೆ ನೌಶಾದ್.

- ಪ್ರಭಾಕರ್