ಸೋಮವಾರಪೇಟೆ, ಏ. 30: ಪ್ರತಿ ಬೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಕನಿಷ್ಟ 100 ಮಂದಿಯಿಂದ ತಲಾ 100 ರೂಪಾಯಿಯಂತೆ ಸಂಗ್ರಹಿಸಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸುವಂತೆ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಿದ್ದು, ಈ ಹಿನ್ನೆಲೆ ಪ್ರತಿ ಬೂತ್ ಅಧ್ಯಕ್ಷರು ಕಾರ್ಯೋನ್ಮುಖರಾಗಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ.

ಪರಿಹಾರ ನಿಧಿಗೆ ದೇಣಿಗೆ: ಸೋಮವಾರಪೇಟೆಯ ತಥಾಸ್ತು ಸಂಸ್ಥೆಯಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 5000 ರೂಪಾಯಿಗಳ ಚೆಕ್‍ನ್ನು ಶಾಸಕ ಅಪ್ಪಚ್ಚು ರಂಜನ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭ ತಥಾಸ್ತು ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್, ಪದಾಧಿಕಾರಿಗಳಾದ ಜಯಪ್ರಕಾಶ್, ಶಿವಕುಮಾರ್, ಉದಯ ಅವರುಗಳು ಉಪಸ್ಥಿತರಿದ್ದರು.