*ಗೋಣಿಕೊಪ್ಪ, ಏ. 30: ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ವಾಹನ ಚಾಲಕರ ಸಂಘದ ಸದಸ್ಯ ರಿಗೆ ಗೋಣಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ರೂ. 1,500 ಪರಿಹಾರ ನಿಧಿಯನ್ನು ಹಂಚ ಲಾಯಿತು.
ಗೋಣಿಕೊಪ್ಪ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅವರ ನೇತೃತ್ವದಲ್ಲಿ ಸಂಘ ದಲ್ಲಿ ಸದಸ್ಯರಾಗಿ ನೋಂದಾಯಿತ ರಾಗಿರುವ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪೆÇ್ರೀತ್ಸಾಹಕರ ಹಣವನ್ನು ನೀಡಲಾಯಿತು.
ಸಂಘದ ಇತರ ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿರಿಸಿದ ಸಂಘದ ನಿಧಿಯಿಂದ ಈ ಹಣವನ್ನು ಬಳಕೆ ಮಾಡಿಕೊಂಡಿದ್ದು, ಸದಸ್ಯರ ಆರ್ಥಿಕ ಸಂಕಷ್ಟವನ್ನು ಅಲ್ಪ ಪ್ರಮಾಣ ದಲ್ಲಾದರೂ ಕುಂಠಿತಗೊಳಿಸುವ ಪ್ರಯತ್ನಕ್ಕೆ ಮುಂದಾಗಿರುವುದಾಗಿ ಬೋಪಣ್ಣ ತಿಳಿಸಿದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ, ಖಜಾಂಚಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.