ಕೂಡಿಗೆ, ಏ. 29: ಕೊರೊನಾ ವೈರಾಣು ಸೋಂಕು ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿದೆ. ಇದರ ನಡುವೆಯೂ ಕೆಲವು ಯುವಕರು ಹಾಗೂ ಮಕ್ಕಳು ನದಿಯಲ್ಲಿ ಗುಂಪು ಗುಂಪಾಗಿ ಈಜಾಟದಲ್ಲಿ ತೊಡಗು ತ್ತಿರುವುದು ಕಾಣಬಹುದಾಗಿದೆ.

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಜನರನ್ನು ಮನೆಯಲ್ಲಿ ಸುರಕ್ಷಿತವಾಗಿ ರುವಂತೆ ಆದೇಶಿಸಿದೆ. ಆದರೆ ಈವರೆಗೆ ಮನೆಯಲ್ಲಿಯೇ ಕುಳಿತು ಜೋತುಬಿದ್ದಿರುವ ಯುವಕರು ಹಾಗೂ ಮಕ್ಕಳು ಮನೆಯಿಂದ ಹೊರಬಂದು ಆಟದ ಮೈದಾನ, ನದಿ, ಕೊಳದತ್ತ ಕಾಲಕಳೆಯಲು ಮುಖಮಾಡುತ್ತಿದ್ದಾರೆ.

ಸುತ್ತಮುತ್ತಲ ಪ್ರದೇಶ ಗಳಲ್ಲಿರುವ ನದಿ, ಕೊಳದಲ್ಲಿ ಮಕ್ಕಳು ಆಟವಾಡಲು ತೆರಳುತ್ತಿರುವುದು ಪೆÇೀಷಕರಿಗೆ ತಲೆನೋವಾಗಿ ಪರಿಣಮಿಸಿದೆ.

ಒಂದೆಡೆ ಕೊರೊನಾ ಭೀತಿಯಾದರೇ ಮತ್ತೊಂದೆಡೆ ನದಿಯಲ್ಲಿ ಅನಾಹುತ ಸಂಭವಿಸ ಬಹುದು ಎಂಬ ಭಯ. ಪೆÇೀಷಕರಿಗೆ ಕೊರೊನಾ ಸಮಯದಲ್ಲಿ ಮಕ್ಕಳನ್ನು ಸುಧಾರಿಸುವುದು ಸವಾಲಾಗಿ ಪರಿಣಮಿಸಿದೆ.

ಬೇಸಿಗೆ ರಜೆಯಲ್ಲಿ ಕುಟುಂಬಸ್ಥ ರೊಡನೆ, ಸ್ನೇಹಿತರೊಡನೆ ಕಾಲ ಕಳೆಯಬೇಕಾದ ಮಕ್ಕಳು ಕೊರೊನಾ ದಿಂದಾಗಿ ಮನೆಯಲ್ಲಿಯೇ ಉಳಿಯ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಇದೀಗ ಮಕ್ಕಳ ತಾಳ್ಮೆಯ ಕಟ್ಟೆಹೊಡೆದು ಮನೆಯಿಂದ ಹೊರಬಂದು ಆಟೋಟಗಳಲ್ಲಿ ತೊಡಗಿದ್ದಾರೆ.

ಇನ್ನು ತಮ್ಮ ಕುಟುಂಬಸ್ಥರೊಡನೆ ಹಾಗೂ ಗೆಳೆಯ ರೊಡನೆ ಪ್ರವಾಸ ತೆರಳಿ ಮನೋರಂಜನೆ ಹಾಗೂ ಸುಂದರ ಅನುಭವಗಳನ್ನು ಪಡೆದು ಮಜಾ ಮಾಡಬೇಕು ಎಂದು ಮೊದಲೇ ಪೂರ್ವಾರ್ಜಿತವಾಗಿ ಅಲೋಚಿಸಿ ರಜೆಗಾಗಿ ಕಾದು ಕುಳಿತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಎಫೆಕ್ಟ್ ಭಾರೀ ನಿರಾಸೆ ಮೂಡಿಸಿದೆ.

ಕುಶಾಲನಗರ, ಕೂಡಿಗೆ, ಗುಡ್ಡೆಹೊಸೂರು ಸೇರಿದಂತೆ ಇನ್ನಿತರ ಪ್ರದೇಶಗಳ ನದಿ ದಂಡೆಗಳಲ್ಲಿ ಮಕ್ಕಳು ಹಾಗೂ ಯುವಕರು ಗುಂಪು ಸೇರಿ ಆಟವಾವಾಡುತ್ತಿರುವುದನ್ನು ನೋಡಬಹುದಾಗಿದೆ. ಕಾವೇರಿ ನದಿ ದಡದಂಚಿನಲ್ಲಿರುವ ಮೈಸೂರು ಜಿಲ್ಲೆಯ ಕೆಲವು ಊರುಗಳ ಯುವಕರು ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದಾರೆ.

ಬೇಸಿಗೆಯಿಂದ ನದಿ, ಕೊಳಗಳಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಮಕ್ಕಳು ನದಿಗೆ ಸ್ನಾನಕ್ಕೆ ತೆರಳುತ್ತಿದ್ದರು. ಕಳೆದ ಮೂರು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ನದಿಯ ನೀರಿನ ಮಟ್ಟ ಅಧಿಕವಾಗಿದ್ದು, ನೀರಿನಲ್ಲಿ ಆಡುವ ಸಂದರ್ಭ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಪೆÇೀಷಕರು ಗಮನ ಹರಿಸಬೇಕಾಗಿದೆ.

ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುವವರನ್ನು ಗುರುತಿಸಿರುವ ಪೆÇಲೀಸರು ಇತ್ತ ಗಮನ ಹರಿಸಬೇಕಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ