ಸೋಮವಾರಪೇಟೆ: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಹಾರ ಕಿಟ್-ಪಡಿತರ ಸಾಮಗ್ರಿಗಳನ್ನು ವಿತರಿಸಲಾಯಿತು. ದೂರದ ಹಾವೇರಿ ಜಿಲ್ಲೆಯಿಂದ ರಸ್ತೆ ಕೆಲಸಕ್ಕಾಗಿ ಆಗಮಿಸಿ ಲಾಕ್‍ಡೌನ್‍ನಿಂದಾಗಿ ಊರಿಗೆ ತೆರಳದೇ ಹೊಸಬೀಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಮತ್ತು ತಂಡದವರು ಅಗತ್ಯ ಆಹಾರದ ಕಿಟ್‍ಗಳನ್ನು ವಿತರಿಸಿದರು. ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ರುವ ಶೌಚಾಲಯವನ್ನು ಶುಚಿಗೊಳಿಸುವ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಗೆ ಗುತ್ತಿಗೆದಾರ ಸಂಪತ್ ಶಂಭು ಅವರು ಪಡಿತರ ಸಾಮಗ್ರಿ, ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕ ಎಸ್.ಎ. ಮುರುಳೀಧರ್ ಅವರು ತಾತ್ಕಾಲಿಕ ಗ್ಯಾಸ್ ಸಂಪರ್ಕ, ಕುಂಬೂರು ವಿಶ್ವ ಅವರು ಆಹಾರದ ಕಿಟ್‍ಗಳನ್ನು ವಿತರಿಸಿದರು.ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಸೋಮವಾರಪೇಟೆ ವ್ಯಾಪ್ತಿಯ 50ಕ್ಕೂ ಅಧಿಕ ಬಡ ನಿರ್ಗತಿಕ ಮತ್ತು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಅಗತ್ಯ ಪರಿಹಾರ ಧನದ ಕಿಟ್‍ಗಳನ್ನು ವಿತರಿಸಲಾಯಿತು. ಪಟ್ಟಣ ಸಮೀಪದ ಕರ್ಕಳ್ಳಿ, ಕರ್ಕಳ್ಳಿ ಬಾಣೆ, ಬಳಗುಂದ, ಗಾಂಧಿನಗರ, ಚೌಡ್ಲು ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಬಡ, ಅನಾರೋಗ್ಯ ಪೀಡಿತ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗೌಡಳ್ಳಿ ಸುನಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಪದಾಧಿಕಾರಿಗಳಾದ ಕೊಮಾರಿ ಸತೀಶ್, ಜಗನ್ನಾಥ್, ವೆಂಕಪ್ಪ, ಜೀವನ್, ಈಶ ಸೇರಿದಂತೆ ಇತರರು ಹಾಜರಿದ್ದರು.ಕುಶಾಲನಗರ: ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ಆಟೋ ಚಾಲಕರು ಮತ್ತು ಮನೆ ಕೆಲಸ ಮಾಡುವ ಮಹಿಳೆಯರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು. 35ಕ್ಕೂ ಅಧಿಕ ಮಂದಿಗೆ ನೀಡಲಾಯಿತು ಎಂದು ಟ್ರಸ್ಟ್ ಅಧ್ಯಕ್ಷ ವಿ.ಪಿ.ನಾಗೇಶ್ ತಿಳಿಸಿದ್ದಾರೆ.ಗೋಣಿಕೊಪ್ಪ ವರದಿ: ಶ್ರೀ ಸತ್ಯಸಾಯಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾಯಿಶಂಕರ್ ಲಿವಿಂಗ್ ಲೈಟ್ ಟ್ರಸ್ಟ್ ವತಿಯಿಂದ 18 ಛಾಯಾಗ್ರಾಹಕರಿಗೆ ಅಗತ್ಯ ವಸ್ತುಗಳ ಕಿಟ್‍ಗಳನ್ನು ನೀಡಲಾಯಿತು. ಈ ಸಂದರ್ಭ ಶ್ರೀ ಸತ್ಯಸಾಯಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚೆಪ್ಪುಡೀರ ಪ್ರಥ್ವಿ ಪೂಣಚ್ಚ, ಮಂಡಳಿ ಸದಸ್ಯರಾದ ಬಿದ್ದಾಟಂಡÀ ಸಾಬು ಕಾವೇರಪ್ಪ, ಆದೇಂಗಡ ವಾಸು ಬೆಳ್ಯಪ್ಪ, ಆದೇಂಗಡ ನಂದ ಅಪ್ಪಯ್ಯ, ಪಂದ್ಯಂಡ ಜೋಯಪ್ಪ, ತೀತೀರ ಅಪ್ಪಣ್ಣ, ಸಾಯಿಶಂಕರ್ ಲಿವಿಂಗ್ ಲೈಟ್ ಟ್ರಸ್ಟ್ ಸದಸ್ಯ ಉಳುವಂಗಡ ಲೋಹಿತ್ ಭೀಮಯ್ಯ ಇದ್ದರು.ಸೋಮವಾರಪೇಟೆ: ಪಟ್ಟಣದ ಹಿರಿಯ ವಕೀಲ ಹಾಗೂ ನೋಟರಿ ಯಾಗಿರುವ ದೇವಸ್ಥಾನ ರಸ್ತೆ ನಿವಾಸಿ ಹೆಚ್.ಬಿ. ಈಶ್ವರಚಂದ್ರ ಸಾಗರ್ ಅವರು ಸೋಮವಾರಪೇಟೆ ಸುತ್ತಮುತ್ತಲ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು. ಲಾಕ್‍ಡೌನ್ ಹಿನ್ನೆಲೆ ಕೂಲಿ ಕೆಲಸವೂ ಇಲ್ಲದೇ ತೀರಾ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳೂ ಸೇರಿದಂತೆ ವಿಕಲಚೇತನ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಈಶ್ವರಚಂದ್ರ ಸಾಗರ್ ಅವರು, ಸರ್ಕಾರದ ಲಾಕ್‍ಡೌನ್ ನಿಂದಾಗಿ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ತಾವು ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ ಯೋಜನೆಗೆ ಅಕ್ಕಿ ಸೇರಿದಂತೆ ದಿನಸಿ ಪದಾರ್ಥಗಳನ್ನು ನೀಡಿದ್ದಾಗಿ ತಿಳಿಸಿದರು. ಇದರೊಂದಿಗೆ ಸೋಮವಾರಪೇಟೆ ಸುತ್ತಮುತ್ತಲಲ್ಲಿ ತೀರಾ ಸಂಕಷ್ಟದ ಜೀವನ ಸಾಗಿಸುತ್ತಿರುವ 60 ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಿದ್ದು, ಮುಂದೆಯೂ ತಮ್ಮ ಕೈಲಾದ ಸಹಾಯ ನೀಡುವ ದಾಗಿ ಹೇಳಿದರಲ್ಲದೇ, ಅರ್ಹರಿಗೆ ಸೌಲಭ್ಯ ದೊರೆತಾಗ ಮಾತ್ರ ಸೇವೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು. ಈ ಸಂದರ್ಭ ವಕೀಲ ಪವನ್‍ಸಾಗರ್ ಮತ್ತು ಕುಟುಂಬಸ್ಥರು, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಕರಿಬಸಪ್ಪ ಅವರುಗಳು ಉಪಸ್ಥಿತರಿದ್ದರು.ಕೂಡಿಗೆ: ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಹೆಚ್ಚು ಕೂಲಿ, ಕಟ್ಟಡ ಕಾರ್ಮಿಕ ಕುಟುಂಬಗಳು ವಾಸವಿರುವ ಹಿನ್ನೆಲೆಯಲ್ಲಿ ಗೊಂದಿಬಸವನಹಳ್ಳಿ ಗ್ರಾಮಕ್ಕೆ 30 ಕ್ವಿಂಟಾಲ್ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಗೊಂದಿಬಸವನಹಳ್ಳಿ ವ್ಯಾಪ್ತಿಯ ಸದಸ್ಯ ಹರೀಶ್ 30 ಕ್ವಿಂಟಾಲ್ ಅಕ್ಕಿಯನ್ನು 300 ಕುಟುಂಬದವರಿಗೆ ತಲಾ 10 ಕೆ.ಜಿ.ಯಂತೆ ವಿತರಣೆ ಮಾಡಿದರು.

ಪೊನ್ನಂಪೇಟೆ: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರಿಗೆ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ವತಿಯಿಂದ ಪಡಿತರ ಕಿಟ್ ವಿತರಿಸಲಾಯಿತು. ಗದಗ ಜಿಲ್ಲೆಯಿಂದ ಬಂದು ರಸ್ತೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಟಿ. ಶೆಟ್ಟಿಗೇರಿಯಲ್ಲಿ ಟೆಂಟ್‍ಗಳಲ್ಲಿ ವಾಸವಾಗಿದ್ದರು. ಕಿಟ್ ವಿತರಣೆ ಸಂದರ್ಭ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್, ಪಿ.ಡಿ.ಓ. ಕವಿತಾ, ಆರ್.ಐ. ಸುದೀಂದ್ರ, ಗ್ರಾಮ ಲೆಕ್ಕಿಗ ಪ್ರಶಾಂತ್ ಹಾಗೂ ಬಿಲ್‍ಕಲೆಕ್ಟರ್ ಪ್ರಶಾಂತ್ ಹಾಜರಿದ್ದರು.ಮಡಿಕೇರಿ: ಪೆರುಂಬಾಡಿ ಚೆಕ್‍ಪೊಸ್ಟ್ ಬಳಿಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಶಿವು ಅವರಿಗೆ ಮಾಧ್ಯಮ ಸ್ಪಂದನ ತಂಡ ಆಹಾರ ಕಿಟ್ ತಲುಪಿಸಿದೆ. ಮಾಧ್ಯಮ ಸ್ಪಂದನ ತಂಡದ ಟಿ.ಎನ್. ಮಂಜುನಾಥ್ ಪ್ರಯತ್ನದಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಸ್ಪಂದನ ತಂಡದ ಟಿ.ಎನ್. ಮಂಜುನಾಥ್, ಪಾರ್ಥ ಚಿಣ್ಣಪ್ಪ ಮಾಕುಟ್ಟಕ್ಕೆ ತೆರಳಿ ಕಿಟ್ ವಿತರಿಸಿದರು.

ಮಡಿಕೇರಿ: ಮಡಿಕೇರಿಯ ಡೈರಿ ಫಾರ್ಮ್‍ನಲ್ಲಿ ನೆಲೆಸಿರುವ ದುರ್ಬಲ ವರ್ಗದ ಇಬ್ಬರು ಮಹಿಳೆಯರಿಗೆ ಮಾಧ್ಯಮ ಸ್ಪಂದನದಿಂದ ಆಹಾರ ಕಿಟ್ ವಿತರಿಸಲಾಯಿತು. ಮಾಧ್ಯಮ ಸ್ಪಂದನ ತಂಡದ ಥೋಮಸ್ ಅಲೆಗ್ಸಾಂಡರ್ ಆಸಕ್ತಿ ವಹಿಸಿ, ಮಡಿಕೇರಿಯ ಎ.ಬಿ. ಫುಡ್ಸ್ ಮೂಲಕ ಕಿಟ್ ಒದಗಿಸಿದ್ದಾರೆ.ಸೋಮವಾರಪೇಟೆ: ಕಾಡಾನೆ ಧಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಪರಿಹಾರ ಧನದ ಚೆಕ್‍ನ್ನು ಮೃತನ ಪತ್ನಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಸ್ತಾಂತರಿಸಿದರು. ತಾ. 11 ರಂದು ತಾಲೂಕಿನ ರಂಗಸಮುದ್ರ ಸಮೀಪದ ಕಬ್ಬಿನಗದ್ದೆ ಎಂಬಲ್ಲಿ ಕಾಡಾನೆ ಧಾಳಿಯಿಂದ ಲೋಕೇಶ್ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ರೂ. 7.50 ಲಕ್ಷ ಪರಿಹಾರ ಧನದ ಚೆಕ್‍ನ್ನು ವಿತರಿಸಿದರು. ಈ ಸಂದರ್ಭ ಎ.ಸಿ.ಎಫ್. ನೆಹರು, ಆರ್‍ಎಫ್‍ಓ ಅನನ್ಯಕುಮಾರ್ ಅವರುಗಳು ಉಪಸ್ಥಿತರಿದ್ದರು.ಮಡಿಕೇರಿ: ಲಾಕ್‍ಡೌನ್ ಹಿನ್ನೆಲೆ ನಗರಸಭೆ ವತಿಯಿಂದ ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಗರದ ಮೈಸೂರು ರಸ್ತೆ, ಸ್ಟೀವರ್ಟ್ ಹಿಲ್, ಗೌಳಿಬೀದಿ, ರಾಣಿಪೇಟೆ, ಹಿಲ್ ರೋಡ್, ಕೆನರಾ ಬ್ಯಾಂಕ್ ಕಾಲೋನಿ, ಸುಬ್ರಹ್ಮಣ್ಯ ಕಾಂಪೌಂಡ್ ಎಫ್‍ಎಂಸಿ ಕಾಲೇಜು ಹತ್ತಿರ, ಕಾನ್ವೇಂಟ್ ಜಂಕ್ಷನ್‍ಗಳಲ್ಲಿ ವಾಸವಾಗಿರುವ ಗಾರೆಕೆಲಸ ಮತ್ತು ಇತರ ವಲಸೆ ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಲಾಯಿತು.

ಜೊತೆಗೆ ಕಾರ್ಮಿಕ ಇಲಾಖೆಯಿಂದ ಬಿಎಂಎಸ್ ಕಟ್ಟಡ ಕಾರ್ಮಿಕರ ಸಂಘಕ್ಕೆ ಕಾರ್ಮಿಕರಿಗೆ ವಿತರಿಸುವ ಸಲುವಾಗಿ ಮಾಸ್ಕ್, ಹ್ಯಾಂಡ್‍ವಾಶ್ ಸೋಪ್ ಮತ್ತು ಸ್ಯಾನಿಟೈಜರ್‍ಗಳನ್ನು ವಿತರಿಸಲಾಯಿತು. ಈ ಸಮಯದಲ್ಲಿ ಕೋವಿಡ್-19ರ ಕುರಿತು ಮಾಹಿತಿ ನೀಡಿ ಕಾರ್ಮಿಕರ ಕೊಂದು ಕೊರತೆಗಳ ಕುರಿತು ವಿಚಾರಿಸಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ನಗರಸಭೆಯ ಬಶೀರ್ ಇತರರು ಇದ್ದರು.

ನಾಪೋಕ್ಲು: ಇಲ್ಲಿನ ಪಿಪಿ ಫೌಂಡೇಶನ್ ವತಿಯಿಂದ ನಾಪೋಕ್ಲು ವ್ಯಾಪ್ತಿಯ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಪಿಪಿ ಫೌಂಡೇಶನ್ ಅಧ್ಯಕ್ಷ ಪಿ.ಪಿ. ಮಹಮದ್ ಹಾಜಿ ಅವರ ನೇತೃತ್ವದಲ್ಲಿ ಧವಸ ಧಾನ್ಯಗಳನ್ನು ವಿತರಿಸಲಾಯಿತು. ಪಿಪಿ ಫೌಂಡೇಶನ್ ಪದಾಧಿಕಾರಿಗಳು ಹಾಜರಿದ್ದರು. ಸುಂಟಿಕೊಪ್ಪ: ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ವತಿಯಿಂದ ಸಮೀಪದ ಮಾದಾಪುರದಲ್ಲಿ ಟೈಲರಿಂಗ್ ತರಬೇತಿ ಪಡೆದ ಎಲ್ಲಾ 100 ಮಂದಿ ಸದಸ್ಯರಿಗೂ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಆಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪಾನಂದ ಸ್ವಾಮೀಜಿ, ಬೋಪೇಂದ್ರನಂದ ಸ್ವಾಮೀಜಿ ಮತ್ತು ಆಶ್ರಮದ ಸ್ವಯಂಸೇವಕರು ಹಾಗೂ ಇತರರು ಇದ್ದರು.