ಮಡಿಕೇರಿ, ಏ. 28: ಭಾಗಮಂಡಲ-ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಿಯ ವಾರ್ಷಿಕೋತ್ಸವ ಸಂಪ್ರದಾಯದಂತೆ ತಾ. 25 ರಿಂದ ಪ್ರಾರಂಭಗೊಂಡು ಮೇ 5 ರಂದು ಅಂತ್ಯಗೊಳ್ಳಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ವರ್ಷದ ವಾರ್ಷಿಕೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಅಧ್ಯಕ್ಷರು, ಆಡಳಿತ ಮಂಡಳಿ, ತಕ್ಕಮುಖ್ಯಸ್ಥರು, ಗ್ರಾಮಸ್ಥರು ತಿಳಿಸಿದ್ದಾರೆ.