ಕೆ.ಜಿ. ಬೋಪಯ್ಯ ಸ್ಪಷ್ಟನೆ

ಮಡಿಕೇರಿ, ಏ. 28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಬೂತ್ ಮಟ್ಟದಲ್ಲಿ ಕನಿಷ್ಟ ರೂ. 100 ಸಂಗ್ರಹಿಸಿ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ಕಳುಹಿಸುವಂತೆ ಘೋಷಿಸಿದ್ದರು.

ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲೂ ಸಹ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅಂತರ ಕಾಯ್ದುಕೊಂಡು, ಬಿಜೆಪಿ ಕಾರ್ಯಕರ್ತರ ಮನೆ ಮನೆಗೆ ತೆರಳಿ 100 ರೂ. ಸಂಗ್ರಹಿಸುತ್ತಿದ್ದಾರೆ. ಇದುವರೆಗೆ ಒಟ್ಟು ರೂ. 18 ಲಕ್ಷ ಹೆಚ್ಚು ಹಣ ಸಂಗ್ರಹಿಸಿ, ಪ್ರಧಾನಮಂತ್ರಿ ಅವರ ಪರಿಹಾರ ನಿಧಿಗೆ ಕಳುಹಿಸಲಾಗಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ. ಚೇಲವಾರ ಗ್ರಾಮದ ಬೂತ್ ಸಮಿತಿಯ ಅಧ್ಯಕ್ಷ ಕುಟ್ಟಣ ರಾಧಾಕೃಷ್ಣ (ರವಿ) ಅವರ ಮನೆಗೆ ದೂರನ್ನು ಆಧರಿಸಿ ನಾಪೋಕ್ಲುವಿನ ಪೊಲೀಸರು ರಾತ್ರಿ 8.30 ಗಂಟೆ ವೇಳೆಯಲ್ಲಿ ಏಕಾಏಕಿ ದಾಳಿ ಮಾಡಿ, ಬೆದರಿಕೆ ಒಡ್ಡಿದ್ದಾರೆ. ಜೊತೆಗೆ ಪರಿಹಾರ ನಿಧಿಯ ಪುಸ್ತಕವನ್ನು ಸಹ ವಶಪಡಿಸಿಕೊಂಡಿದ್ದಾರೆ. ಡಿವೈಎಸ್‍ಪಿ ಅವರ ಮುಂದೆ ಹಾಜರುಪಡಿಸಿದ್ದಾರೆ. ಇದು ಸರಿಯಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಅಸಮಾಧಾನ