ಗೋಣಿಕೊಪ್ಪ ವರದಿ, ಏ. 28: ಮುಂಜಾನೆಯ ‘ವಾಕಿಂಗ್’ ಸಂದರ್ಭ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ ಘಟನೆ ಗೋಣಿಕೊಪ್ಪ - ಮೈಸೂರು ಹೆದ್ದಾರಿಯ ಚೆನ್ನಂಗೊಲ್ಲಿ ಎಂಬಲ್ಲಿ ನಡೆದಿದೆ. ಬಾಳಾಜಿ ಗ್ರಾಮದ ಸುರೇಶ್ ಬಾಬು ಎಂಬ ವ್ಯಕ್ತಿ ಯಾವದೇ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಶ್ ಅವರ ಪ್ರಕಾರ; ಆನೆಯು ಅವರ ಬಲತೊಡಗೆ ತುಳಿದಿದ್ದು; ಆನೆಯ ಪಾದದ ಕೆಸರು ಮಿಶ್ರಿತ ಗುರುತು ಆಗಿರುತ್ತದೆ. ಘಟನೆಯ ಬಗ್ಗೆ ಯಾವದೇ ಮಾಹಿತಿ ಇಲ್ಲ ಎಂದು ವೀರಾಜಪೇಟೆ ತಾಲೂಕು ಅರಣ್ಯ ಉಪಸಂರಕ್ಷಣಾಧಿಕಾರಿ ಶಿವಶಂಕರ್ ‘ಶಕ್ತಿ’ಗೆ ತಿಳಿಸಿದ್ದಾರೆ.