ಮಡಿಕೇರಿ, ಏ. 28: ಕಾಡುನಾಯಿಗಳ (ಕೆನ್ನಾಯಿ) ದಾಳಿಗೆ ಸಿಲುಕಿ ಜಿಂಕೆಯೊಂದು ಬಲಿಯಾಗಿದೆ. ವೀರಾಜಪೇಟೆ ಅರಣ್ಯ ವಲಯದಲ್ಲಿ ಬರುವ ಕರಡಿಗೋಡುವಿನ ಶಿಲ್ಪಿ ಎಸ್ಟೇಟ್‍ನಲ್ಲಿ ಹೆಣ್ಣು ಜಿಂಕೆಯ ಕಳೇಬರ ಪತ್ತೆಯಾಗಿದೆ. ಈ ಜಿಂಕೆಯನ್ನು ಅಟ್ಟಾಡಿಸಿರುವ ನಾಯಿಗಳು ಜಿಂಕೆಯನ್ನು ಕೊಂದು ಹಾಕಿದ್ದು; ಸ್ವಲ್ಪ ಭಾಗವನ್ನು ತಿಂದು ಹಾಕಿವೆ. ವಿಷಯವರಿತು ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಸಿಬ್ಬಂದಿ ಅರುಣ, ಆರ್‍ಆರ್‍ಟಿ ತಂಡದ ಸದಸ್ಯರು ಭೇಟಿ ನೀಡಿ ಮಹಜರು ನಡೆಸಿದರು. ಅಮ್ಮತ್ತಿಯ ಪಶುವೈದ್ಯ ಶಾಂತೇಶ್ ಕಳೇಬರಹದ ಮರಣೋತ್ತರ ಪರೀಕ್ಷೆ ನಡೆಸಿದ್ದು; ಬಳಿಕ ಮಣ್ಣು ಮಾಡಲಾಯಿತು.