ಮಡಿಕೇರಿ, ಏ. 28: ಇಸಿಹೆಚ್‍ಎಸ್ ಅವಲಂಭಿತರು ಲಾಕ್‍ಡೌನ್ ಮುಂದುವರಿದ ಕಾರಣ ಔಷಧಿಗಳನ್ನು ಮೇ 31 ರ ತನಕ ಹೊರಗಡೆಯಿಂದ ಇಸಿಹೆಚ್‍ಎಸ್ ಮೆಡಿಕಲ್ ಆಫೀಸರ್ ಬರೆದ ಬುಕ್ಕನ್ನು, ಚೀಟಿಯನ್ನು ತೋರಿಸಿ ತೆಗೆದುಕೊಳ್ಳಬಹುದು. ಔಷಧಿಗಳಿಗಾಗಿ ಮೇ 31 ರ ತನಕ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ಗೆ ಬರುವ ಅವಶ್ಯಕತೆ ಇರುವುದಿಲ್ಲ. ತೆಗೆದುಕೊಂಡ ಮಾತ್ರೆಗಳ ಬಿಲ್ಲನ್ನು ಜೂನ್ 10 ರ ನಂತರ ಅವಲಂಭಿತ ಪಾಲಿಕ್ಲಿನಿಕ್‍ಗೆ ತಂದುಕೊಡಬೇಕಾಗಿ ತಿಳಿಸಲಾಗಿದೆ.