ಮಡಿಕೇರಿ, ಏ. 27: ಅಮೇರಿಕಾದ ಅಕ್ಕ ಸಂಸ್ಥೆ ವತಿಯಿಂದ ಮಕ್ಕಂದೂರಿನಲ್ಲಿ ನಿರ್ಮಾಣ ವಾಗುತ್ತಿರುವ ಶಾಲಾ ಕಟ್ಟಡದ ಟೈಲ್ಸ್, ಫೆÇ್ಲೀರಿಂಗ್ ಕೆಲಸಕ್ಕೆಂದು ಬೆಂಗಳೂರಿನಿಂದ ಬಂದು ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳ ಗಾಗಿರುವ ಎರಡು ಕುಟುಂಬಕ್ಕೆ ಆಹಾರ ಕಿಟ್ ನೀಡಲಾಯಿತು. ಮಾಧ್ಯಮ ಸ್ಪಂದನದ ಬಗ್ಗೆ ಮಾಹಿತಿ ಅರಿತ ಮಕ್ಕಂದೂರಿನ ಕೋಡಿಯಡ್ಕ ರಮೇಶ್ ಅವರು ಮಾಧ್ಯಮ ತಂಡದ ಸದಸ್ಯ ಕುಡೆಕಲ್ ಸಂತೋಷ್, ವಿಶ್ವ ಕುಂಬೂರು ಗಮನಕ್ಕೆ ತಂದಿದ್ದರು. ಮಕ್ಕಂದೂರು ಶಾಲೆಯಲ್ಲೇ ತಂಗಿರುವ ರಾಮಸ್ವಾಮಿ ಹಾಗೂ ಧನುರಾಜ್ ಕುಟುಂಬಗಳಿಗೆ ಮಕ್ಕಂದೂರು ಗ್ರಾ.ಪಂ. ಸದಸ್ಯ, ಸುವರ್ಣ ಕಾಫಿ ಲಿಂಕ್ಸ್ ನ ಮಾಲೀಕ ಬಿ.ಎನ್. ರಮೇಶ್ ಹದಿನೈದು ದಿನಗಳಿಗಾಗುವಷ್ಟು ಆಹಾರ ಕಿಟ್ ಒದಗಿಸಿ ನೆರವಾದರು.

* ದಾರಿ ತಪ್ಪಿ ಮೂಡಿಗೆರೆಗೆ ಹೋಗಬೇಕಾದವರು ಮಡಿಕೇರಿಗೆ ಬಂದು ದಿಕ್ಕು ತೋಚದೆ ಮಕ್ಕಂದೂರಿನ ಮಾಜಿ ಸೈನಿಕರೋರ್ವರ ಮನೆಯ ಅಂಗಳದಲ್ಲಿ ಆಶ್ರಯ ಪಡೆದಿರುವ ಅಸ್ಸಾಂ ಮೂಲದ ಕುಟುಂಬಕ್ಕೆ ಆಹಾರ ಕಿಟ್ ಒದಗಿಸಲಾಯಿತು.

* ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಬೋರ್‍ವೆಲ್ ಪೈಸಾರಿ ಬಳಿ ನೆಲೆಸಿರುವ ಒಂಟಿ ವೃದ್ಧೆ ಮಹಿಳೆಗೆ ದಿನಸಿ ಸಾಮಗ್ರಿ ನೀಡಲಾಯಿತು. ಕಿಟ್ ವಿತರಣೆ ಸಂದರ್ಭ ಮಾಧ್ಯಮ ಸ್ಪಂದನ ತಂಡದ ಕುಡೆಕಲ್ ಸಂತೋಷ್, ದಾನಿ ಬಿ.ಎನ್. ರಮೇಶ್, ನೀಲ್ ರಮೇಶ್ ಇದ್ದರು.

ಮಡಿಕೇರಿ : ಮಾಧ್ಯಮ ಸ್ಪಂದನ ತಂಡದ ಕೋರಿಕೆ ಹಿನ್ನೆಲೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ತಕ್ಷಣದ ಸ್ಪಂದನೆಯಿಂದ ಗುಹ್ಯದ ಕ್ಯಾನ್ಸರ್ ಪೀಡಿತ ಮಹಿಳೆಯನ್ನು ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಪೊಲೀಸ್ ಪಾಸ್ ನೀಡಲಾಗಿದೆ.

ಮಡಿಕೇರಿ: ಮೈಸೂರಿನಲ್ಲಿ ನೆಲೆಸಿದ್ದ ಮಡಿಕೇರಿ ಮೂಲದ ಕ್ಯಾನ್ಸರ್ ರೋಗಿಯನ್ನು ಮಡಿಕೇರಿಗೆ ಕರೆದುಕೊಂಡು ಬರಲು ಮಾಧ್ಯಮ ಸ್ಪಂದನ ಸಹಕಾರ ನೀಡಿದೆ. ಸ್ಪಂದನ ತಂಡದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಮೈಸೂರಿಗೆ ವಾಹನದಲ್ಲಿ ತೆರಳಿ ಮೈಸೂರಿನಿಂದ ರೋಗಿಯನ್ನು ಕರೆದು ಕೊಂಡು ಬಂದಿದ್ದಾರೆ.

ಮಡಿಕೇರಿ: ಮಕ್ಕಂದೂರಿನಲ್ಲಿ ನೆಲೆಸಿರುವ ವಲಸೆ ಕಾರ್ಮಿಕ ಕುಟುಂಬಕ್ಕೆ ಅಗತ್ಯವಾದ ಬಟ್ಟೆಗಳನ್ನು ಮಾಧ್ಯಮ ಸ್ಪಂದನ ಮೂಲಕ ತಲುಪಿಸಲಾಗಿದೆ. ಗೋಪಾಲ್ ಸೋಮಯ್ಯ ಪ್ರಯತ್ನದಿಂದ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಮಾಜಿ ಅಧ್ಯಕ್ಷ ಕಟ್ಟೆಮನೆ ರಾಕೇಶ್ ಬಳಕೆಗೆ ಯೋಗ್ಯವಾಗಿರುವ ಮಕ್ಕಳ ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.