ನಾಪೆÇೀಕ್ಲು, ಏ. 27: ನಾಪೆÇೀಕ್ಲುವಿಗೆ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಭೇಟಿ ನೀಡಿ ಅಂಗಡಿಗಳ ಪರಿಶೀಲನೆ ನಡೆಸಿದರು. ಮಾರುಕಟ್ಟೆಯಿಂದ ಪಟ್ಟಣದವರೆಗೆ ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿದ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಮಾಸ್ಕ್ ಧರಿಸದೇ ಇರುವದು ಮತ್ತಿತರ ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ 500 ರಿಂದ 5000 ರೂ. ವರೆಗೆ ದಂಡ ವಿಧಿಸಿದರು. ಎಲ್ಲಾ ಕಡೆಗಳಲ್ಲಿಯೂ ಸರಕಾರದ ಕಾನೂನನ್ನು ಪಾಲಿಸಲಾಗುತ್ತಿದೆ. ಆದರೆ ನಾಪೆÇೀಕ್ಲುವಿನಲ್ಲಿ ಈ ಬಗ್ಗೆ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಲೆಕ್ಕಾಧಿಕಾರಿ ನಂದಿನಿ, ಬಿಲ್ ಕಲೆಕ್ಟರ್ ವಿರನ್ ಮತ್ತು ಸಿಬ್ಬಂದಿ ಇದ್ದರು.