ಶ್ರೀಮಂಗಲ, ಏ. 27: ದಕ್ಷಿಣ ಕೊಡಗಿನ ಜಿಲ್ಲಾ ಗಡಿ ಮತ್ತು ರಾಜ್ಯದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭೇಟಿ ನೀಡಿ ಕೋವಿಡ್-19 ವೈರಸ್ ಸೋಂಕು ಹಿನ್ನೆಲೆ ಲಾಕ್‍ಡೌನ್‍ನಿಂದ ಉಂಟಾಗಿರುವ ಕುಂದು ಕೊರತೆ ಆಲಿಸಿದರು. ಕೇರಳ ಗಡಿಗೆ ಹೊಂದಿ ಕೊಂಡಿರುವ ಕುಟ್ಟ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಕೇರಳ -ಕೊಡಗು ಸಂಪರ್ಕ ರಸ್ತೆಯನ್ನು ಮಣ್ಣು ಹಾಕಿ ಸಂಚಾರಕ್ಕೆ ಅವಕಾಶವಾಗದಂತೆ ತಡೆ ಮಾಡಲಾಗಿದೆ. ಆದರೂ ಸ್ಥಳೀಯ ಹೂವಿನ ಕಾಡು ಮತ್ತು ಫೈತ್ ಕಾಫಿ ತೋಟದ ಮೂಲಕ ಕೇರಳಕ್ಕೆ ತೆರಳುವ ಅಥವಾ ಈ ಮಾರ್ಗದಲ್ಲಿ ಜಿಲ್ಲೆಗೆ ಕೇರಳದ ಜನರು ಪ್ರವೇಶಿಸುವ ಮುನ್ನೆಚ್ಚರಿಕೆ ಯಿಂದ 24 ಗಂಟೆ ಪೆÇಲೀಸ್ ತಂಡ ನಿಯೋಜಿಸಲಾಗಿದೆ ಎಂದು ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮಾಹಿತಿ ನೀಡಿದರು. ಈ ಸಂದರ್ಭ ಪೆÇಲೀಸ್ ಠಾಣೆಯಲ್ಲಿ ಪೆÇಲೀಸರ ಕುಂದು ಕೊರತೆ,ಆಹಾರ ವ್ಯವಸ್ಥೆ ಬಗ್ಗೆ ವೀಣಾ ಅಚ್ಚಯ್ಯ ಆಲಿಸಿದರು.ಕುಟ್ಟ ಪೆÇಲೀಸ್ ವಸತಿ ಗೃಹ ಮತ್ತು ಠಾಣೆಗೆ ನೀರಿನ ಸಂಪರ್ಕ ಇಲ್ಲ. ವಸತಿ ಗೃಹ ಸಮೀಪ ತಡೆಗೋಡೆ ಕಾಮಗಾರಿ ಅರ್ಧದಲ್ಲಿ ಸ್ಥಗಿತವಾಗಿದ್ದು, ಮೈಸೂರುವಿನ ಮಹದೇವಯ್ಯ ಅವರು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದಾರೆ.ಈ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳದಿದ್ದರೆ, ಮಳೆ ಸಂದರ್ಭ ವಸತಿ ಗೃಹಕ್ಕೆ ಬರೆ ಕುಸಿಯುವ ಆತಂಕವಿದೆ.ಇದಲ್ಲದೆ ಸಣ್ಣ ಮಳೆ ಸುರಿದರೂ ವಸತಿಗೃಹಕ್ಕೆ ನೀರಿನೊಂದಿಗೆ ಮಣ್ಣು ಸೇರುವ ಆತಂಕವನ್ನು ವೃತ್ತ ನಿರೀಕ್ಷಕ ಪರಶಿವಮೂರ್ತಿ ವ್ಯಕ್ತಪಡಿಸಿದರು. ಸರಕಾರದ ಗಮನಕ್ಕೆ ಶ್ರೀಮಂಗಲ-ಕುಟ್ಟ ಅಂತರರಾಜ್ಯ ಹೆದ್ದಾರಿ ನಡುವೆ ಕಾಯಿಮನಿ ಗ್ರಾಮದಲ್ಲಿ ಹಳೆಯ ಸೇತುವೆಯನ್ನು ಮುರಿದು ಹೊಸ ಸೇತುವೆ ಕಾಮಗಾರಿ ಸ್ಥಗಿತವಾಗಿದೆ. ಈಗಾಗಲೇ ಹಳೆಯ ಸೇತುವೆ ತೆರವುಗೊಳಿಸಲಾಗಿದೆ. ಹೊಸ ಸೇತುವೆ ಕಾಮಗಾರಿ ಆಗಿಲ್ಲ. ತಾತ್ಕಾಲಿ ಕವಾಗಿ ಮೋರಿ ನಿರ್ಮಿಸಿ ವಾಹನ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕಾಮಗಾರಿ ಮಳೆಗಾಲದ ಒಳಗೆ ಆಗದಿದ್ದರೆ, ತಾತ್ಕಾಲಿಕ ವ್ಯವಸ್ಥೆಯ ರಸ್ತೆಯಲ್ಲಿ ವಾಹನ ಸಾಗಲು ಸಾಧ್ಯವಿಲ್ಲ. ಕಾಮಗಾರಿ ಪೂರ್ಣ ಗೊಳಿಸದಿದ್ದರೆ (ಮೊದಲ ಪುಟದಿಂದ) ಸಂಚಾರ ಕಡಿತವಾಗಲಿದೆ ಎಂದು ಜಿ.ಪಂ.ಸದಸ್ಯ ಶಿವು ಮಾದಪ್ಪ ಗಮನ ಸೆಳೆದರು. ವೀಣಾ ಅಚ್ಚಯ್ಯ ಮಾತನಾಡಿ, ಲಾಕ್‍ಡೌನ್‍ನಿಂದ ಕಾಮಗಾರಿ ಸ್ಥಗಿತವಾಗಿದೆ. ಪೆÇಲೀಸ್ ವಸತಿ ಗೃಹ ತಡೆಗೋಡೆ ಕಾಮಗಾರಿಯನ್ನು ಮೈಸೂರುವಿನ ಮಹದೇವಯ್ಯ, ಕಾಯಿಮನಿ ಸೇತುವೆ ಕಾಮಗಾರಿಯನ್ನು ಸಹ ಮೈಸೂರುವಿನ ರಮೇಶ್ ಅವರು ಗುತ್ತಿಗೆ ಹೊಂದಿಕೊಂಡಿದ್ದು, ಈ ಕಾಮಗಾರಿಗಳನ್ನು ಮಳೆಗಾಲ ಮುನ್ನ ಪೂರ್ಣಗೊಳಿಸಲು ಅವಕಾಶಕಲ್ಪಿಸುವಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗುವುದು.

ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವೇ ಹೊರಜಿಲ್ಲೆಯ ಕಾರ್ಮಿಕರನ್ನು ಬಳಸಿಕೊಳ್ಳಲು ಜಿಲ್ಲಾಡಳಿತದೊಂದಿಗೆ ಸಂಬಂಧಿಸಿದ ಗುತ್ತಿಗೆದಾರರು ಸಮಾಲೋಚಿಸಿ ಸೂಕ್ತ ನಿರ್ದೇಶನ ಪಾಲಿಸಿ,ಕಾಮಗಾರಿ ನಡೆಸಲು ಅವಕಾಶವಿದ್ದರೆ ಮಾಡಬಹುದು ಎಂದರು. ಕುಟ್ಟ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.ಈ ಸಂದರ್ಭ ಕಾರ್ಮಿಕರು, ಬಿಪಿಲ್ ಮತ್ತು ಎಪಿಎಲ್ ಪಡಿತರ ಕಾರ್ಡ್‍ಗೆ ಸರಕಾರದಿಂದ ಪಡಿತರ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಕೆಲಸಗಾರರ ಸಂಕಷ್ಟ

ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಪ್ಲಂಬರ್ಸ್, ಎಲೆಕ್ಟ್ರಿಷನ್ಸ್ ಕೆಲಸಗಾರರಿಗೆ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರಕಾರ ಸೂಕ್ತ ನೆರವು ನೀಡುವಂತೆ ಗ್ರಾ.ಪಂ.ಸದಸ್ಯ ಹೆಚ್.ವೈ.ರಾಮಕೃಷ್ಣ ಮನವಿ ಮಾಡಿದರು. ಆನೆಚೌಕೂರು ಗೇಟ್ ಮೂಲಕ ಕೊಡಗಿನಲ್ಲಿ ಬೆಳೆಗಾರರು ಬೆಳೆದ ಬಾಳೆ ಬೆಳೆಯನ್ನು ಜಿಲ್ಲೆಯ ಹೊರಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು.ಇದಕ್ಕೆ ಸರಕಾರ ಬೆಳೆಗಾರರಿಗೆ ಸರಳ ದಾಖಲೆಯೊಂದಿಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ, ಸರಕಾರವೇ ಜಿಲ್ಲೆಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸಲು ಮುಂದಾಗಬೇಕೆಂದು ಬೆಳೆಗಾರರು ಮನವಿ ಮಾಡಿದರು. ಈ ಎಲ್ಲಾ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗಮನಸೆಳೆಯುವ ಭರವಸೆಯನ್ನು ವೀಣಾ ಅಚ್ಚಯ ನೀಡಿದರು.

ಈ ಸಂದರ್ಭ ಪೆÇನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೀದೆರೀರ ನವೀನ್, ಕೊಲ್ಲಿರ ಬೋಪಣ್ಣ, ತೀತೀರ ಧರ್ಮಜ ಉತ್ತಪ್ಪ, ಗೋಣಿಕೊಪ್ಪ ಎಪಿಎಂಸಿ ಮಾಜಿ ಸದಸ್ಯೆ ಕಡೆಮಾಡ ಕುಸುಮ ಜೋಯಪ್ಪ,ಜಿ.ಪಂ.ಸದಸ್ಯೆ ಪಂಕಜ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ, ತಿತಿಮತಿ ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್, ಮುಕ್ಕಾಟೀರ ಸಂದೀಪ್, ಅಜ್ಜಿಕುಟ್ಟಿರ ಅಪ್ಪಾಜಿ, ಗ್ರಾ.ಪಂ.ಸದಸ್ಯರುಗಳಾದ ಜಮ್ಮಡ ಸೋಮಣ್ಣ, ಕುಲ್ಲಚಂಡ ಬೋಪಣ್ಣ, ಮುರುಗ ಮತ್ತಿತರರು ಇದ್ದರು.