ಮಡಿಕೇರಿ, ಏ. 27: ಕೇವಲ ಕೋವಿಡ್-19 ಒಂದು ಪಾಸಿಟಿವ್ ಪ್ರಕರಣ ಮಾತ್ರ ಇದ್ದ ಕೊಡಗು ಜಿಲ್ಲೆಯಲ್ಲಿ ಆ ಪ್ರಕರಣವೂ ಬಳಿಕ ನೆಗೆಟಿವ್ ಆಯಿತು. ಜೊತೆಗೆ ಕಳೆದ ಒಂದು ತಿಂಗಳಿಂದಲೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಲಿಲ್ಲ. ಈ ಹಿಂದೆ ರಾಜ್ಯದಲ್ಲಿ ಹಳದಿ ವಲಯವಾಗಿ ಪರಿಗಣಿಸಲ್ಪಟ್ಟಿದ್ದ ಕೊಡಗು ಜಿಲ್ಲೆಯನ್ನು ಇದೀಗ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಹಸಿರು ವಲಯವಾಗಿ ಪರಿವರ್ತಿಸಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಕೊರೊನಾ ಮುಕ್ತ ಜಿಲ್ಲೆಯಾಗಿ ಪರಿಗಣಿಸಲಾಗಿದೆ.ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಶಕ್ತಿ ಸಂಪರ್ಕಿಸಿದಾಗ ಸರ್ಕಾರವು ಕೊಡಗು ಜಿಲ್ಲೆಯನ್ನು ಹಸಿರು ವಲಯವಾಗಿ ಘೋಷಿಸಿರುವುದನ್ನು ಖಚಿತಪಡಿಸಿದರು. ಕೊಡಗಿನ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಕೇಸರಿ ವಲಯವಾಗಿದ್ದರೆ (6-14 ಸೋಂಕಿತ ಪ್ರಕರಣ), ಮೈಸೂರು ಇ&divound;ನ್ನೂ ಕೂಡ 15 ಪ್ರಕರಣಗಳಿಗಿಂತ ಅಧಿಕ ಸೋಂಕಿರುವುದರಿಂದ ಕೆಂಪು ವಲಯವಾಗಿ ಮುಂದುವರಿದಿದೆ. ಆದರೆ ಮತ್ತೊಂದು ಗಡಿ ಜಿಲ್ಲೆ ಹಾಸನ ಹಸಿರು ವಲಯವಾಗಿದೆ.