ಮಡಿಕೇರಿ, ಏ. 27: ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಭಿ ಕಲ್ಯಾಣ ಯೋಜನೆಯಡಿ; ಸಾಲ ಸೌಲಭ್ಯ ಕಲ್ಪಿಸಲು ಜಿಲ್ಲೆಗೆ ರೂ. 11.5 ಕೋಟಿ ಹಣ ಬಿಡುಗಡೆ ಗೊಳಿಸಿದೆ. ಈ ಸೌಲಭ್ಯವನ್ನು ಕಾರ್ಮಿಕ ಕಲ್ಯಾಣ ಭವಿಷ್ಯನಿಧಿ ಯೋಜನೆಯಲ್ಲಿ ಸಾಲ ರೂಪದಲ್ಲಿ ಶೇ. 75 ರಷ್ಟು ಹೊಂದಲು ಅರ್ಹ ಕಾರ್ಮಿಕರಿಗೆ ಅವಕಾಶವಿದೆ ಎಂದು ಜಿಲ್ಲಾ ಕಾರ್ಮಿಕ ಭವಿಷ್ಯನಿಧಿ ಇಲಾಖೆ ಸಹಾಯಕ ಆಯುಕ್ತ ಪವನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಭಿ ಕಲ್ಯಾಣ ನಿಧಿ ಮೂಲಕ ರೂ. 15 ಸಾವಿರಕ್ಕಿಂತಲೂ ಕಡಿಮೆ ವೇತನ ಪಡೆಯುತ್ತಿರುವ ಕಾರ್ಮಿಕರಿಗೆ ಸರಕಾರವೇ ಶೇ. 24 ರಷ್ಟು ತಿಂಗಳ ಸಂಬಳವನ್ನು 3 ತಿಂಗಳುಗಳು ಕಾಲ (ಮಾರ್ಚ್, ಏಪ್ರಿಲ್, ಮೇ) ಭವಿಷ್ಯ ನಿಧಿ ಖಾತೆಗೆ ಪಾವತಿಸಲಿದೆ. ಈ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ 100 ಅಧಿಕ ಕಾರ್ಮಿಕರು ಇರತಕ್ಕದ್ದು ಹಾಗೂ ಈ ಸಂಸ್ಥೆಯಲ್ಲಿ ಇರುವ ಶೇ. 90 ರಷ್ಟು ಕಾರ್ಮಿಕರ ತಿಂಗಳ ವೇತನ ರೂ. 15 ಸಾವಿರಕ್ಕಿಂತ ಕಡಿಮೆ ಇರತಕ್ಕದ್ದು; ಎಂದು ಅಧಿಕಾರಿ ಪವನ್ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08272- 229838 ಜಿಲ್ಲಾ ಕಾರ್ಮಿಕ ಭವಿಷ್ಯನಿಧಿ ಇಲಾಖಾ ಕಚೇರಿ ಸಂಪರ್ಕಿಸಬಹುದಾಗಿದೆ.