ಸಿದ್ದಾಪುರ, ಏ. 27: ವೀರಾಜಪೇಟೆ ತಾಲೂಕು ಕರಡಿಗೋಡು ಗ್ರಾಮದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡಿ, ವ್ಯಾಪಾರ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕರಡಿಗೋಡು ಗ್ರಾಮದ ಹೊಸಗದ್ದೆ ಎಂಬಲ್ಲಿ ರಾಜೇಶ ಹಾಗೂ ಹರೀಶ್ ಅವರ ಮನೆಯಲ್ಲಿ ಜಿಂಕೆ ಮಾಂಸ ದಾಸ್ತಾನು ಮಾಡಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶಿಣಿ ಅವರ ತಂಡ ಕಾರ್ಯಾಚರಣೆ ನಡೆಸಿ ಹಸಿ ಮಾಂಸ, ಬೇಯಿಸಿದ ಮಾಂಸ ಹಾಗೂ ಜಿಂಕೆಯ ಕಾಲುಗಳನ್ನು ಬೈಕ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕರಡಿಗೋಡು ಗ್ರಾಮದ ಹರೀಶ್ ಪಿ.ಕೆ. (48) ಮತ್ತು ಮಣಿ (56)ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ದೀಲಿಪ್ ಕುಮಾರ್, ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್, ಸಚಿನ್, ಅಕ್ಕಮ್ಮ ರಕ್ಷಕ ಅರುಣ್ ಹಾಗೂ ಚಾಲಕ ಅಚ್ಚಯ್ಯ, ಆರ್,ಆರ್, ಟಿ ತಂಡದ ದಿಲೀಪ್, ವಿನೋದ್, ರಾಚ, ಮುರುಗ, ಮಂಜು, ಆದರ್ಶ, ವಿನೀತ್ ಪಾಲ್ಗೊಂಡಿದ್ದರು.