ಭಾರತದಲ್ಲಿ ಕೊರೊನಾ ವೈರಾಣುವಿನಿಂದ ಸೋಂಕಿಗೆ ಒಳಗಾದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ ಪ್ರತೀ ವಾರ (ಗುರುವಾರ) ಕಡ್ಡಾಯವಾಗಿ ನಡೆಸಲಾಗುತ್ತಿದ್ದ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳು ದಿಢೀರನೆ ಸ್ಥಗಿತಗೊಂಡಿವೆ. ಆಗಲೇ ಕೊರೊನಾ ಸೋಂಕಿನ ಹರಡುವಿಕೆ ಹಾಗೂ ಚಿಕಿತ್ಸೆಯಿಂದ ತತ್ತರಿಸಿಹೋಗಿರುವ ನಮ್ಮ ಆರೋಗ್ಯ ಇಲಾಖೆಯು ಮಕ್ಕಳ ಲಸಿಕಾ ಕಾರ್ಯಕ್ರಮಗಳನ್ನು ಮುಂದುವರೆಸುವುದು ಕಷ್ಟಕರವಾಗಿದೆ. ಶೀತಲ ಸರಪಳಿ (ಅoಟಜ ಅhಚಿiಟಿ) ನಿರ್ವಹಣೆ ಮತ್ತು ನಿಯಮಿತವಾಗಿ ಲಸಿಕೆಗಳ ಸಾಗಾಣಿಕೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಅದರ ವಿತರಣೆ ಎಲ್ಲವೂ ಕ್ಲಿಷ್ಟಕರವಾಗುತ್ತಿದೆ. ಇದಕ್ಕೆ ಬೇಕಾದ ಸವಲತ್ತು ಹಾಗೂ ಸಿಬ್ಬಂದಿ ವರ್ಗವನ್ನು ಕೊರೊನಾ ಸಾಂಕ್ರಾಮಿಕದ ತಡೆಗೆ ನಿಯೋಜಿಸಲಾಗಿರುವುದರಿಂದ ಲಸಿಕಾ ಕಾರ್ಯಕ್ರಮದ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಮನೆಯಿಂದ ಮಕ್ಕಳನ್ನು ಹೊರತಂದು ಆಸ್ಪತ್ರೆಗೆ ಒಯ್ದು ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರೂ ಸಹ ಹೆದರುತ್ತಿದ್ದಾರೆ.

ಪರಿಣಾಮವೇನು?

ಇಂದ್ರ ಧನುಷ್ ಕಾರ್ಯಕ್ರಮದಿಂದ ತಡೆಯಬಹುದಾದ 7 ಮಹಾಮಾರಿಗಳು ಪೋಲಿಯೋ (Poಟio), ದಡಾರ (ಒeಚಿsಟes), ಗಂಟಲುಮಾರಿ (ಆiಠಿಣheಡಿiಚಿ), ನಾಯಿಕೆಮ್ಮು (Peಡಿಣussis), ಇನ್‍ಫ್ಲುಎನ್ಸಾ ನಿಮೋನಿಯಾ (ಊ.Iಟಿಜಿಟueಟಿzಚಿ Pಟಿeumoಟಿiಚಿ) ಮತ್ತು ಕಾಮಾಲೆ (ಊeಠಿಚಿಣiಣis) ಸಮಾಜದಲ್ಲಿ ಏಕಾಏಕಿ ಹೆಚ್ಚಾಗುತ್ತವೆ. ಕಡ್ಡಾಯ ಹಾಗೂ ಐಚ್ಛಿಕ ಲಸಿಕೆಗಳು ಎರಡೂ ಕಡಿಮೆಯಾದರೆ ಟೈಫಾಯಿಡ್, ಅತಿಸಾರ (ಆiಚಿಡಿಡಿhoeಚಿ) ಮುಂತಾದವು ಕೂಡ ಹೆಚ್ಚುತ್ತವೆ. ಮಕ್ಕಳ ರೋಗ ನಿರೋಧಕ ಶಕ್ತಿ ಕುಂದುತ್ತದೆ.

ಲಸಿಕಾ ಕಾರ್ಯಕ್ರಮ ಹೀಗೆ ಹಠಾತ್ತನೆ ನಿಂತು ಹೋದರೆ ಪ್ರತಿ ವಾರಕ್ಕೆ 5.5 ಲಕ್ಷ ಮಕ್ಕಳಿಗೆ ಲಸಿಕೆ ಅಪೂರ್ಣಗೊಳ್ಳುತ್ತದೆ. ಜುಲೈ 2019 ರಲ್ಲಿ ಹುಟ್ಟಿದ ಮಕ್ಕಳಿಗೆ ದಡಾರದ ಲಸಿಕೆ (ಒeಚಿsಟes / ಒಒಖ) ಸಿಗುವುದಿಲ್ಲ. ಜನವರಿ 2020 ರಲ್ಲಿ ಹುಟ್ಟಿದ ಮಕ್ಕಳಿಗೆ ಆPಖಿ, Poಟio ಲಸಿಕೆಗಳು (ಃooಡಿsಣeಡಿ ಆoses) ಪೂರ್ಣಗೊಳ್ಳುವುದಿಲ್ಲ. ಒಟ್ಟು 32.4 ಲಕ್ಷ ಮಕ್ಕಳು ಲಸಿಕೆಗಳನ್ನು ಪೂರ್ಣಗೊಳಿಸುವುದಿಲ್ಲ. ಇದರಿಂದ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಹೆಚ್ಚಾಗಿ 5 ವರ್ಷಕ್ಕಿಂತ ಕೆಳಪಟ್ಟ ಮಕ್ಕಳಲ್ಲಿ ಕುಪೋಷಣೆ ಮತ್ತು ಸಾವು ಹೆಚ್ಚಾಗಿ ಸಂಭವಿಸುತ್ತದೆ.

ದೀರ್ಘ ಕಾಲದಲ್ಲಿ ಆಗುವ ಸಮಸ್ಯೆಗಳೇನು?

2018 ರಲ್ಲಿ ಭಾರತ ಪೋಲಿಯೋ (Poಟio) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಿದೆ ಎಂಬ ಬಿರುದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಮಕ್ಕಳಲ್ಲಿ ಮತ್ತೆ ಜ್ವರದೊಂದಿಗೆ ಸಪ್ಪೆ ಪಾಶ್ರ್ವವಾಯು (Pಟಚಿಛಿಛಿiಜ Pಚಿಡಿಚಿಟಥಿsis) ಕಂಡುಬಂದರೆ ಪೋಲಿಯೋ ಪುನರಾರಂಭವಾಗಿರಬಹುದೆಂಬ ಸಂಶಯ ಬರುತ್ತದೆ. ಆಗ ಸಮಾಜ ಸರ್ವೇಕ್ಷಣೆ ನಡೆಸಿ ಖಚಿತಪಡಿಸಿಕೊಂಡು ಅದನ್ನು ಹರಡದಂತೆ ತಡೆಗಟ್ಟುವ ಕ್ರಮಗಳನ್ನು ಜರುಗಿಸಬೇಕಾಗುತ್ತದೆ.

ನಾವೇನು ಮಾಡಬೇಕು?

1. ಹುಟ್ಟಿದ ತಕ್ಷಣ ನೀಡುವ ಃಅಉ, Poಟio ಮತ್ತು ಊeಠಿಚಿಣiಣis ಲಸಿಕೆಗಳನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಕೊಡಿಸಬೇಕು (ಮಗು ಮತ್ತು ತಾಯಿ ಆಸ್ಪತ್ರೆಯಿಂದ ಬಿಡುಗಡೆ ಆಗುವ ಮುನ್ನ).

2. ಜ್ವರ, ಸಪ್ಪೆ ಪಾಶ್ರ್ವವಾಯು, ದಡಾರ, ನಾಯಿಕೆಮ್ಮು, ಕಾಮಾಲೆ ಮುಂತಾದವು ಮಕ್ಕಳಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು.

3. ಕೊರೊನಾ ಸೋಂಕಿತ ತಾಯಂದಿರು ಹಾಗೂ ಕ್ವಾರಂಟೈನ್‍ನಲ್ಲಿರುವ ತಾಯಂದಿರು ವೈದ್ಯರ ಸಲಹೆ ಪಡೆದು ತಮ್ಮ ನವಜಾತ ಶಿಶುಗಳಿಗೆ ಲಸಿಕೆ ಕೊಡಿಸಬೇಕು.

ಸರ್ಕಾರದ ಕರ್ತವ್ಯಗಳೇನು?

1. ಆಸ್ಪತ್ರೆಗಳಲ್ಲಿ ಲಸಿಕೆಗಳ ಲಭ್ಯತೆ ಬಗ್ಗೆ ಗಮನ ಹರಿಸಬೇಕು.

2. ಸಾಮೂಹಿಕ ಲಸಿಕಾ ಕಾರ್ಯಕ್ರಮಗಳನ್ನು ಲಾಕ್‍ಡೌನ್ ಮುಗಿಯುವವರೆಗೆ ಆಯೋಜಿಸಬಾರದು.

3. ಇಂದ್ರ ಧನುಷ್ ಕಾರ್ಯಕ್ರಮವನ್ನು ಲಾಕ್‍ಡೌನ್ ಅವಧಿ ಮುಗಿದ ನಂತರ ತೀವ್ರಗೊಳಿಸಬೇಕು.

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಬೇರೆ ರೋಗಗಳಿಗೆ ದಾರಿ ಮಾಡಿಕೊಡದಂತೆ ಈ ಸಮಯದಲ್ಲಿ ಎಚ್ಚರಿಕೆ ವಹಿಸೋಣ. ಜವಾಬ್ದಾರಿಯಿಂದ ನಮ್ಮ ಮಕ್ಕಳ ಲಸಿಕೆಗಳನ್ನು ಪೂರ್ಣಗೊಳಿಸೋಣ. ಮಕ್ಕಳ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

- ಡಾ|| ಶಿಲ್ಪ ಸತೀಶ್, ಕೂರ್ಗ್‍ಪಾಥ್ ಕೇರ್, ಮಹದೇವಪೇಟೆ, ಮಡಿಕೇರಿ.