ವೀರಾಜಪೇಟೆ, ಏ.26: ಜಿಲ್ಲಾಡಳಿತದ ಯೋಜನೆಯಾದ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ ವೀರಾಜಪೇಟೆ ಉಪ ವಿಭಾಗದ ವಿವಿಧ ಕಡೆಗಳಿಂದ ನೆರವು ಹರಿದು ಬಂದಿದ್ದು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಸ್ತುವಾರಿಯಲ್ಲಿ ಪಡಿತರ ಸಾಮಗ್ರಿಗಳನ್ನು ಸಂಗ್ರಹಿಸ ಲಾಗುತ್ತಿದೆ ಎಂದು ತಹಶೀಲ್ದಾರ್ ನಂದೀಶ್ ಮಾಹಿತಿ ನೀಡಿದ್ದಾರೆ.
ಐ.ಟಿ.ಡಿ.ಪಿ ಇಲಾಖೆಯಲ್ಲಿ ನೋಂದಾವಣಿ ಆಗದೆ ಇರುವ ಹಾಗೂ ಪಡಿತರ ಚೀಟಿ ಇಲ್ಲದೆ ಇರುವ 3892 ಕುಟುಂಬಗಳ ಮಾಹಿತಿ ನೀಡಿದೆ. ಈಗ ಶೇಖರಣೆ ಆಗಿರುವ ಪಡಿತರ ಸಾಮಗ್ರಿಗಳಲ್ಲಿ ಕೇವಲ 300 ಕುಟುಂಬಗಳಿಗೆ ಮಾತ್ರ ವಿತರಣೆ ಮಾಡಬಹುದು, ಉಳಿದ ಕುಟುಂಬ ಗಳಿಗೆ ಎಸ್.ಡಿ.ಆರ್‍ಎಫ್ ಫಂಡ್‍ನಿಂದ ಖರೀದಿ ಮಾಡಿ ವಿತರಿಸಲಾಗುವುದು. ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ 1647 ಜನರನ್ನು ಗರುತಿಸಲಾಗಿದ್ದು ರೇಷನ್ ಕಾರ್ಡ್ ಇಲ್ಲದವರಿಗೆ ಈಗಾಗಲೇ ಎರಡನೇ ಬಾರಿಗೂ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಎಸ್.ಐ. ಮರಿಸ್ವಾಮಿ ಹಾಜರಿದ್ದರು.
ಸೋಮವಾರಪೇಟೆ
ಪಟ್ಟಣÀದ 100ಕ್ಕೂ ಅಧಿಕ ಕುಟುಂಬಗಳಿಗೆ ಕುಸುಬೂರು ಎಸ್ಟೇಟ್‍ನ ಮಾಲೀಕ ಪ್ರೀತಮ್ ಬಸಪ್ಪ ಅವರು ಅಗತ್ಯ ಆಹಾರ ಕಿಟ್‍ಗಳನ್ನು ವಿತರಿಸಿದರು.
ಪಟ್ಟಣ ಸುತ್ತಮುತ್ತಲಿನ ಬಜೆಗುಂಡಿ, ಕೆಂಚಮ್ಮನಬಾಣೆ, ಕಾರೇಕೊಪ್ಪ ವ್ಯಾಪ್ತಿಯಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿರುವ ಬಡ ಕೂಲಿ ಕಾರ್ಮಿಕರು, ವಿಶೇಷಚೇತನ ಕುಟುಂಬಗಳಿಗೆ ಅವರು ನೀಡಿದ ಕಿಟ್‍ಗಳನ್ನು, ಎಸ್ಟೇಟ್‍ನ ವ್ಯವಸ್ಥಾಪಕ ಎಂ.ಸಿ. ಕಿರಣ್, ಸ್ಥಳೀಯರಾದ ಜನಾರ್ಧನ್, ಪ್ರಶಾಂತ್, ಸಂತೋಷ್ ಅವರುಗಳು ಮನೆ ಮನೆಗೆ ತಲುಪಿಸಿದರು.
ಮಡಿಕೇರಿ
ನಗರ ಡೆಕೋರೇಟರ್ ಕಾರ್ಮಿಕರಿಗೆ ಅಸೋಸಿಯೇಷನ್ ಮಾಲೀಕರ ಸಂಘದ ವತಿಯಿಂದ ಕಾರ್ಮಿಕರಿಗೆ ದವಸಧಾನ್ಯ ವಿತರಿಸ ಲಾಯಿತು. ಈ ಸಂದರ್ಬ ಸಂಘದ ಅಧ್ಯಕ್ಷ ಸುಕುಮಾರ್ ಪಿ.ಜಿ., ಉಪಾಧ್ಯಕ್ಷ ಹರೀಶ್ ಪಿ.ಕೆ., ಪ್ರಧಾನ ಕಾರ್ಯದರ್ಶಿ ಅಜ್ಜೀಟ್ಟಿರ ಲೋಕೇಶ್, ಖಜಾಂಚಿ ಲೋಕೇಶ್ ಸಹ ಕಾರ್ಯದರ್ಶಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.
ಮಕ್ಕಂದೂರು
ಮುಕ್ಕೋಡ್ಲು ಭದ್ರಕಾಳಿ ದೇವಾಲಯದ ಅರ್ಚಕ ಯೋಗೀಂದ್ರ ಅವರ ಮನೆಗೆ ಸುವರ್ಣ ಕಾಫಿ ಡಿಪೊ ಮಕ್ಕಂದೂರು ಮಾಲೀಕ ರಮೇಶ್ ಅವರು ಕಿಟ್ಟನ್ನು ವಿತರಿಸಿದರು.
ಬೈಲುಕೊಪ್ಪ
ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತ ಕೇಂದ್ರ’ದ ಧಾರ್ಮಿಕ ಗುರುಗಳು ಬಡಜನತೆಗೆ ಅಗತ್ಯ ವಸ್ತುಗಳ ವಿತರಣೆ ಮಾಡಿದರು.
ಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಮಹಾದೇವ್ ಉಪಸ್ಥಿತಿಯಲ್ಲಿ ಸುಮಾರು 700ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು. ಬೈಲುಕೊಪ್ಪ ಡ್ರಿಕುಂಗ್ ಚಾರಿಟೇಬಲ್ ಸೊಸೈಟಿ ಆಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಚೋಜೆ ಅಯಾಂಗ್ ರಿಂಪೋಚೆ, ಕರ್ಮ ರಿನ್ಪೋಚೆ, ಆಚಾರ್ಯ ಕೆಂಫೋ ತೈನ್‍ಸಿಂಗ್, ನಬಾಂಗ್ ಕುಂಗಾ ರಿನ್ಪೋಚೆ ಹಾಗೂ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಪ್ರಮುಖರಾದ ಗಿರೀಶ್ ಚಂದ್ರಶೇಖರ್, ಸುರೇಶ್ ಮತ್ತಿತರರು ಇದ್ದರು.