ಗೋಣಿಕೊಪ್ಪ ವರದಿ, ಏ. 26 : ಶನಿವಾರ ತಡರಾತ್ರಿ ನಡಿಕೇರಿ ಗ್ರಾಮದಲ್ಲಿ ಹುಲಿ ಹಸುವನ್ನು ಕೊಂದಿದೆ. ಅಲ್ಲಿನ ಮುದ್ದಿಯಡ ಜಾಲಿ ಎಂಬವರಿಗೆ ಸೇರಿದ ಹಸುವಾಗಿದ್ದು; ಸುಮಾರು 30 ಸಾವಿರ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿನ್ನೆ ಹಸು ಕೊಟ್ಟಿಗೆಗೆ ಬಂದಿರಲಿಲ್ಲ. ಬೆಳಗ್ಗೆ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು, ಹಸುವಿನ ಬಾಲ ತುಂಡಾಗಿತ್ತು. ಈ ಬಗ್ಗೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.